ಉಪ್ಪಿನಂಗಡಿ : ಅರಣ್ಯ ಇಲಾಖೆ ಪ್ರಾರಂಭವಾದ ದಿನಗಳಿಂದ ಇವರನ್ನು ಅರಣ್ಯ ಸಂರಕ್ಷಕ ಅಥವಾ ಗಾರ್ಡ್ ಎಂಬ ಹೆಸರಿನಿಂದಲೆ ಕರೆಯುವುದು ಇಂದಿನವರೆಗೂ ನಡೆದು ಬಂದಿದೆ. ಆದರೆ ಇನ್ನು ಮುಂದೆ ಇವರನ್ನು ಈ ಹೆಸರಿನಿಂದ ಕರೆಯುವಂತಿಲ್ಲ. ಕನ್ನಡದಲ್ಲಿ ಗಸ್ತು ಅರಣ್ಯ ಪಾಲಕ ಮತ್ತು ಆಂಕ್ಲ ಭಾಷೆಯಲ್ಲಿ ಬೀಟ್ ಫಾರೆಸ್ಟರ್ ಎಂದು ಮರುನಾಮಕರಣ ಮಾಡಿ ಅದೇ ಹೆಸರಿನಲ್ಲಿ ಕರೆಯುವಂತೆ ಸರಕಾರ ಆದೇಶ ಹೊರಡಿಸಿದೆ.
ಅರಣ್ಯ ಸಂರಕ್ಷಕರ ಸಂಘದ ಮೂಲಕ ಸರಾಕರಕ್ಕೆ ಮನವಿ ಸಲ್ಲಿಸಿ ಗಾರ್ಡ್ ಎಂಬ ಹೆಸರನ್ನು ಕೈ ಬಿಟ್ಟು ನೂತನ ಹೆಸರು ಇಡುವಂತೆ ಸಂಘ ಮನವಿ ಮಾಡಿತ್ತು. ಮನವಿಯನ್ನು ಪುರಸ್ಕರಿಸಿದ ಸರಕಾರ ಗಸ್ತು ಅರಣ್ಯ ಪಾಲಕ- ಬೀಟ್ ಫಾರೆಸ್ಟರ್ ಎಂದು ನಾಮಕರಣ ಮಾಡಿ ಅದೇ ಹೆಸರಿನಲ್ಲಿ ಕರೆಯುವಂತೆ ಸೂಚಿಸಿ ಆದೇಶ ಹೊರಡಿಸಿದೆ.