ತಾ.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕುವೆಂಪು ಜನ್ಮದಿನಾಚರಣೆ

0

ಪುತ್ತೂರು:ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಿ.29 ರಂದು ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯನ್ನು ಆಚರಿಸಿದರು. ನಡೆಯಿತು.


ಸಂಸ್ಮರಣಾ ಜ್ಯೋತಿ ಬೆಳಗಿಸಿ, ಪುಷ್ಪಾರ್ಚಣೆಗೈದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಮಹಾತ್ಮರ ಜಯಂತಿ ಆಚರಣೆ ಕೇವಲ ಆಚರಣೆಯಲ್ಲ. ಅದರ ಹಿಂದ ಉತ್ತಮ ಉದ್ದೇಶವಿದೆ. ರಾಷ್ಟ್ರಕವಿ ಕುವೆಂಪುರವರು ಸಮಾಜ, ದೇಶಕ್ಕೆ ಉತ್ತಮ ಸಂದೇಶ ನೀಡಿದರು. ಅವರ ಸಂದೇಶವನ್ನು ಮತ್ತೆ ನೆನಪಿಸಿ, ಪಾಲನೆ ಮಾಡುವ ಮೂಲಕ ಕೊಡೆಗೆ ನೀಡಬೇಕು. ಅವರು ಕೇವಲ ಕವಿಯಾಗಿರಲ್ಲಿ. ದೂರದೃಷ್ಠಿಯುಳ್ಳ ಕವಿಯಾಗಿದ್ದರು. ಜನ್ಮ ದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.


ಅತಿಥಿಯಾಗಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಕನ್ನಡ ಶ್ರೇಷ್ಠ ಕವಿಯಾಗಿರುವ ಕುವೆಂಪುರವರ ಸಾಹಿತ್ಯ ಪಯಣ ಆಂಗ್ಲೆ ಭಾಷೆಯಿಂದ ಪ್ರಾರಂಭಿಸಿದ್ದರು. ನಂತರದ ಪರಿವರ್ತನೆಯಿಂದ ಅಪ್ರತಿಮ ಕನ್ನಡ ಕವಿಯಾಗಿ, ರಾಷ್ಟ್ರಕವಿಯಾಗುವ ಮೂಲಕ ಕರ್ನಾಟಕಕ್ಕೆ ಗೌರವರನ್ನು ತಂದುಕೊಟ್ಟವರು ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ನಿಸರ್ಗಪ್ರಿಯ ಜೆ. ಮಾತನಾಡಿ, ಪ್ರಪಂಚ ಒಂದು ಕುಟುಂಬ ಎಂದು ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಆದರ್ಶಗಳನ್ನು ಜೀವನಂದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರೇಡ್-2ತಹಶೀಲ್ದಾರ್ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಸುಲೋಚನಾ ಪಿ.ಕೆ ಕಾರ್ಯಕ್ರಮ ನಿರೂಪಿಸಿದರು. ದಯಾನಂದ ಸ್ವಾಗತಿಸಿ, ವಂದಿಸಿದರು.ಕಂದಾಯ ನಿರೀಕ್ಷಕ ಗೋಪಾಲ್, ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ಕನಕರಾಜ್, ಕಾರ್ತಿಕ್ ಹಾಗೂ ವೀರನಾಥ್ ಅತಿಥಿಗಳನ್ನು ಹೂ ನೀಡಿ, ಶಾಲು ಹಾಕಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here