ಜೋಗಿಬೆಟ್ಟು ಶ್ರೀ ಜುಮಾದಿ ಕಲ್ಲಾಲ್ದ ಗುಳಿಗ, ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಕಲಶಾಭಿಷೇಕ, ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ವಿಟ್ಲ: ಜನವರಿ 26ರಿಂದ 28 ರ ವರೆಗೆ ನಡೆಯಲಿರುವ ಜೋಗಿಬೆಟ್ಟು ಶ್ರೀ ಜುಮಾದಿ ಕಲ್ಲಾಲ್ದ ಗುಳಿಗ ದೈವಸ್ಥಾನ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಪುನರ್ ನಿರ್ಮಾಣಗೊಂಡ ದೈವಸ್ಥಾನದ ಧರ್ಮಚಾವಡಿಯ ಪ್ರವೇಶೋತ್ಸವ ಮತ್ತು ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ರವರು ಬಿಡುಗಡೆಗೊಳಿಸಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಕೀರ ಪೂಜಾರಿ ಜೋಗಿಬೆಟ್ಟು, ಅಧ್ಯಕ್ಷ ಬಾಬು ಕೆ.ವಿ, ಕಾರ್ಯದರ್ಶಿ ಪ್ರಭಾಕರ ಜೆ, ಕೋಶಾಧಿಕಾರಿ ಜಯಪೂಜಾರಿ, ಉತ್ಸವ ಸಮಿತಿ ಸಂಚಾಲಕ ಲೋಕಾನಂದ ಎಳ್ತಿಮಾರ್ ಕಲ್ಲಡ್ಕ, ಸಹ ಸಂಚಾಲಕ ವಿಠಲ ಪೂಜಾರಿ, ಪ್ರಮುಖರಾದ ಕೃಷ್ಣಪ್ಪ ಪೂಜಾರಿ, ಮಂಜುನಾಥ ಕಲ್ಲಕಟ್ಟ, ಮೋನಪ್ಪ ಪೂಜಾರಿ, ದಿವಾಕರ,ಕಮಲ, ತಿಮ್ಮಪ್ಪ ಪಳಿಕೆ, ರಾಜೇಶ್ ಜೋಗಿಬೆಟ್ಟು, ದೈವನರ್ತಕರಾದ ಸತೀಶ್ ಪೆರುವಾಯಿ, ಆನಂದ ಪೆರುವಾಯಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here