ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪ ಕೌಕ್ರಾಡಿ ಗ್ರಾಮದ ಹೊಸಮಜಲುನಲ್ಲಿ ಸೈಕಲ್ಸ್ ಮತ್ತು ಟಯರ್‍ಸ್ ಮಾರಾಟ ಮತ್ತು ಸೇವಾ ಮಳಿಗೆ ‘ವಿನೋದ’ ಡಿ.29ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್‌ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೆಲ್ಯಾಡಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಹೊಸ ಹೊಸ ಉದ್ದಿಮೆ, ವ್ಯಾಪಾರಗಳಿಂದ ಊರಿನ ಅಭಿವೃದ್ಧಿಯೂ ಸಾಧ್ಯವಿದೆ. ನೆಲ್ಯಾಡಿಯಲ್ಲಿ ಅತೀ ಅವಶ್ಯಕವಾಗಿದ್ದ ಸೈಕಲ್ಸ್ ಮತ್ತು ಟಯರ್‍ಸ್ ಮಾರಾಟ ಮತ್ತು ಸೇವಾ ಮಳಿಗೆ ಹೊಸಮಜಲುನಲ್ಲಿ ಆರಂಭಗೊಂಡಿರುವುದು ಹೆಚ್ಚು ಸಂತಸ ತಂದಿದೆ. ಅನುಭವಿ ಶಾಂತಾರಾಮ ಶೆಟ್ಟಿಯವರು ಆರಂಭಿಸಿರುವ ಈ ಉದ್ದಿಮೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.
ಜಿ.ಪಂ.ಮಾಜಿ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ವೆಂಕಟ್ರಮಣ ಆರ್., ನೆಲ್ಯಾಡಿ ಸೈಂಟ್ ಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ., ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷ ಭಾಸ್ಕರ ಎಸ್.ಗೌಡ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪುತ್ತೂರು ತಾಲೂಕು ಶಿವಳ್ಳಿ ಸಂಪದ ಉಪಾಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ನೆಲ್ಯಾಡಿ ಐಐಸಿಟಿ ಕಂಪ್ಯೂಟರ್‍ಸ್‌ನ ಪ್ರಶಾಂತ್ ಸಿ.ಹೆಚ್., ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ, ಕೌಕ್ರಾಡಿ ಗ್ರಾ.ಪಂ.ಪಿಡಿಒ ಮಹೇಶ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಶುಭಹಾರೈಸಿದರು.
ಅತಿಥಿಗಳನ್ನು ಬರಮಾಡಿಕೊಂಡ ಮಾಲಕ ಶಾಂತಾರಾಮ ಶೆಟ್ಟಿಯವರು ಮಾತನಾಡಿ, ನಮ್ಮಲ್ಲಿ ವಿವಿಧ ಹೆಸರಾಂತ ಕಂಪನಿಗಳ ಸೈಕಲ್ ಸೇಲ್ಸ್ ಹಾಗೂ ಸರ್ವೀಸ್, ವೆಹಿಕಲ್ ಟಯರ್ ಸೇಲ್ಸ್ ಮತ್ತು ಸರ್ವೀಸ್ ಹಾಗೂ ಟಯರ್ ಪಂಕ್ಚರ್ ವರ್ಕ್ಸ್ ಮಾಡಿಕೊಡಲಾಗುವುದು. ಗ್ರಾಹಕರು ಸಹಕರಿಸುವಂತೆ ಹೇಳಿದರು. ಲಲಿತಾ ಶಾಂತರಾಮ ಶೆಟ್ಟಿ ಸಹಕರಿಸಿದರು.