ಜನವರಿ 10 ರೊಳಗೆ ಬುಕ್ಜಿಂಗ್ ಮಾಡಿ ,ಆಫರ್ ಗೆಲ್ಲಿ…!
ಪುತ್ತೂರು : ಜಪಾನ್ ತಂತ್ರಜ್ಞಾನ ಆಧಾರಿತ ಉನ್ನತ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ,ಅತ್ಯುತ್ತಮ ದಕ್ಷತೆಯುಳ್ಳ ರಿಸೊ ಕಂಪೆನಿಯ ಪ್ರಿಂಟಿಂಗ್ ಮೆಷಿನ್ ಗಳ ಒಂದು ದಿನದ ಬೃಹತ್ ಮೇಳ ಹಾಗೂ ಲೈವ್ ಡೆಮೊ ಎಕ್ಸ್ ಪೋ ಡೀಲರ್ ಮಂಗಳೂರಿನ ಬಿಜೈ ಬಳಿಯ , ಶಂಕರನಾರಯಣ್ ಕಾರಂತ ಮಾಲಿಕತ್ವದ ಶ್ರೀ ಭಾರತಿ ಸಿಸ್ಟಮ್ಸ್ ಮತ್ತು ಸರ್ವೀಸಸ್ ಇದರ ವತಿಯಿಂದ ಡಿ.30 ರಂದು ಇಲ್ಲಿನ ಲಯನ್ಸ್ ಸೇವಾ ಮಂದಿರದಲ್ಲಿ ಆರಂಭಗೊಂಡಿತು.
ಪುಷ್ಪಲತಾ ಎಸ್ ಕಾರಂತ ದೀಪ ಪ್ರಜ್ವಲಿಸಿ ಪ್ರದರ್ಶನಕ್ಕೆ ಚಾಲನೆ ನೀಡಿ ,ಶುಭ ಹಾರೈಸಿದರು.
ಮಾಲಕ ಶಂಕರನಾರಯಣ್ ಕಾರಂತ್ ಮಾತನಾಡಿ , ರಿಸೊ ಇದರ ಎ 3 ಹಾಗೂ ಬಿ 4 ಎರಡು ಬಗೆಯ ಪ್ರಿಂಟಿಂಗ್ ಮೆಷಿನ್ ಇಲ್ಲಿ ಲಭ್ಯವಿದ್ದು , ಇದಕ್ಕೆ ನುರಿತ ಕಾರ್ಮಿಕ ವರ್ಗದ ಅವಶ್ಯಕತೆಯಿಲ್ಲದೆಯೇ ತ್ವರಿತ ಮುದ್ರಣ ಮಾಡಬಹುದು. ರಾಸಾಯನಿಕ ಮುಕ್ತ ಶಾಯಿ ಬಳಕೆಯಿಂದ ಆರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು ಹಾಗೂ ಪೇಪರ್ ವೇಸ್ಟೇಜ್ ಇಲ್ಲದೆ ಬಲು ವೇಗವಾಗಿ ಚಿಕ್ಕ ಯುಪಿಎಸ್ ಮುಖಾಂತರವೂ ಕಾರ್ಯ ಆರಂಭಿಸುತ್ತದೆ.
ಆಸ್ಪತ್ರೆ ,ಶಾಲಾ ಕಾಲೇಜು ಹಾಗೂ ಪ್ರಿಂಟಿಂಗ್ ಪ್ರೆಸ್ ನಂತಹ ಸಂಸ್ಥೆಗಳಿಗೆ ಈ ಮೆಷಿನ್ ಗಳ ಉಪಯೋಗವು ಖಂಡಿತವಾಗಿಯೂ ವರದಾನವಾಗಲಿದೆ.ಇಷ್ಟೇಯಲ್ಲದೇ ಕ್ಯಾನೋನ್ ಕಂಪೆನಿಯ ಜೆರಾಕ್ಸ್ ಮೆಷಿನ್ ,ಪ್ರಿಂಟರ್ಸ್ ,ಮನಿ ಕೌಂಟಿಂಗ್ ,ಹಾಗೂ ಕಾಫಿ ಮೆಶಿನ್ ಕೂಡ ಅತ್ಯುತ್ತಮ ದರದಲ್ಲಿ ಲಭ್ಯವಿದ್ದು , ಜನವರಿ 10 ರೊಳಗೆ ಬುಕ್ಕಿಂಗ್ ಮಾಡೋ ಗ್ರಾಹಕರಿಗೆ ವಿಶೇಷ ಆಫರ್ ಕೂಡ ಸಿಗಲಿದೆಯೆಂದು ಹೇಳಿ ಸಹಕಾರ ಕೋರಿದರು.
ಹೆಚ್ಚು ವಿವರಗಳಿಗಾಗಿ 7625049915 ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆ ತಿಳಿಸಿದೆ.