ಉಪ್ಪಿನಂಗಡಿ: 15 ನೇ ಶತಮಾನದಲ್ಲಿ ಸೋದೆ ಮಠಾಧೀಶರಾದ ಶ್ರೀ ವಾದಿರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವರಿಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಹಾಗೂ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಡಿ.30ರಂದು 10:16 ರಿಂದ 11:02ರ ವರೆಗಿನ ಕುಂಭ ಲಗ್ನ ಶುಭಮುಹೂರ್ತದಲ್ಲಿ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ ನಡೆಯಿತು.
ಶ್ರೀ ದೇವಾಲಯದಲ್ಲಿ ಡಿ. 25 ರಿಂದ ಆರು ದಿನಗಳ ಕಾಲ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಹಾಗೂ ವೈಭವದಿಂದ ನಡೆದಿದ್ದು, ನಿರಂತರ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧರ್ಮ ಸಭೆಗಳು ನಡೆದವು. ಈ ಎಲ್ಲಾ ದಿನಗಳಲ್ಲಿ ನಿರಂತರ ಅನ್ನ ದಾಸೋಹ ನಡೆದಿದ್ದು, ದಿನಂಪ್ರತಿ ಊರ- ಪರವೂರ ಸಾವಿರಾರು ಮಂದಿ ಶ್ರೀ ದೇವಾಲಯಕ್ಕೆ ಆಗಮಿಸಿ, ದೇವರ ದರ್ಶನ ಪಡೆದು, ಅನ್ನ ಪ್ರಸಾದ ಸ್ವೀಕರಿಸಿದರು.
ಬ್ರಹ್ಮಕಲಶಾಭಿಷೇಕದ ದಿನ ಲೋಕ ಕಲ್ಯಾಣಾರ್ಥವಾಗಿ ದೇವಾಲಯದಲ್ಲಿ ಚಂಡಿಕಾ ಹೋಮ ನಡೆಯಿತು. ಗ್ರಾಮ, ದೂರದ ಗ್ರಾಮಗಳಿಂದಲೂ ಹಸಿರು ಹೊರೆ ಕಾಣಿಕೆ ಸಾಗರೋಪದಿಯಲ್ಲಿ ಹರಿದು ಬಂದಿದ್ದು, ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಕೊನೆಯ ದಿನವೂ ಕೂಡಾ ಶ್ರೀ ದೇವಾಲಯದ ಉಗ್ರಾಣ ಹಸಿರು ಹೊರೆ ಕಾಣಿಕೆಯಿಂದ ತುಂಬಿ ತುಳುಕುತ್ತಿತ್ತು.
ಬ್ರಹ್ಮಕಲಶೋತ್ಸವದ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಭರತ್ ಕುಮಾರ್ ಅರಿಗ ಪಟ್ಟೆಗುತ್ತು, ಕಳೆಂಜಗುತ್ತುವಿನ ಶ್ರೀಮತಿ ಪದ್ಮಾಸಿನಿ ಎನ್. ಜೈನ್, ಅಧ್ಯಕ್ಷರಾದ ಬಿ. ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯದರ್ಶಿ ಉಮಾನಾಥ ಶೆಟ್ಟಿ ಸಂಪಿಗೆಕೋಡಿ, ಕೋಶಾಧಿಕಾರಿ ಅಶೋಕ ಕುಮಾರ್ ಮುಳಿಪಡ್ಪು, ಆಡಳಿತ ಸಮಿತಿಯ ಅಧ್ಯಕ್ಷರಾದ ರೋಹಿತಾಕ್ಷ ಬಾಣಬೆಟ್ಟು, ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್., ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಅವಿನಾಶ್ ಜೈನ್ ಪರಂಗಾಜೆ, ಅಧ್ಯಕ್ಷರಾದ ಶಂಭು ಭಟ್ ಬಡೆಕೋಡಿ, ಕಾರ್ಯದರ್ಶಿ ರಮೇಶ್ ತೋಟ, ಕೋಶಾಧಿಕಾರಿ ಪದ್ಮನಾಭ ಸಾಮಾನಿ ಹಿರುಬೈಲು, ದೇವಾಲಯದ ಪವಿತ್ರಪಾಣಿ ಬಿ. ಕೃಷ್ಣರಾವ್ ಬಾಗ್ಲೋಡಿ, ಅರ್ಚಕರಾದ ಎಂ. ನಾರಾಯಣ ಭಟ್, ಹೊರೆಕಾಣಿಕೆ ಸಮಿತಿಯ ಸಂಚಾಲಕ ನವೀನ್ ಕುಮಾರ್ ಪದಬರಿ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಮೋಹನ್ ಶೆಟ್ಟಿ, ಸಹ ಸಂಚಾಲಕ ಹರೀಶ್, ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಶೆಟ್ಟಿ ಮುಂಡೇವಿನಕೋಡಿ, ವಿವಿಧ ಸಮಿತಿಗಳ ಸಂಚಾಲಕರಾದ ಚಂದಪ್ಪ ಪೂಜಾರಿ ಕೆಳಗಿನಮನೆ, ಲೊಕೇಶ್ ಗೌಡ ಕೊಡ್ಲೆ, ಮಹಾಬಲ ಶೆಟ್ಟಿ ಸಂಪಿಗೆಕೋಡಿ, ರಮೇಶ್ ತೋಟ, ಜಯಶ್ರೀ, ವಿಜಯಲಕ್ಷ್ಮೀ ವಿ. ಶೆಟ್ಟಿ ಪೆರ್ನೆ, ಪ್ರತಿಮಾ ನಾಯಕ್, ವಸಂತ ಶೆಟ್ಟಿ ಮನ್ನೇವು, ಶ್ರೀಮತಿ ಜಯಶ್ರೀ, ಸೌಮ್ಯ ಜೈನ್ ಬಿಳಿಯೂರುಗುತ್ತು, ಕೃಷ್ಣಮೂರ್ತಿ ಕಾರಂತ ಶಂಕರಯ್ಯಪಾಲು, ಮಹಾಬಲ ಪೂಜಾರಿ, ಕೇಶವ ಪೂಜಾರಿ ಸುಣ್ಣಾನ, ವಿಶ್ವನಾಥ ಶೆಟ್ಟಿ ಪೆರ್ನೆ, ಗಂಗಾಧರ ಪೂಜಾರಿ ಪುರಿಯ, ಶ್ರೀಕಾಂತ್ ಯಾದವ ನಾಗಮೂಲೆ, ಪ್ರವೀಣ್ ಮಾಡತ್ತಾರು, ಉಮೇಶ್ ಮಲ್ಲಡ್ಕ, ಪ್ರಮುಖರಾದ ತೋಯಾಜಾಕ್ಷ ಶೆಟ್ಟಿ, ಸಂದೀಪ್ ಪದೆಬರಿ, ಗೋಪಾಲ ಸಪಲ್ಯ, ಸುಂದರ, ಕೇಶವ, ದಿವಾಕರ, ವೇಣುಗೋಪಾಲ, ಸುಧಾಕರ ನಾಯ್ಕ, ಸುಕೇಶ್, ಶಶಿಧರ್, ವಸಂತ ನಾಯ್ಕ, ಮೋಹನ್ ನಾಯ್ಕ, ಮಮತಾ, ರಕ್ಷಿತಾ ಶೆಟ್ಟಿ, ಸಂಜೀವ ಶೆಟ್ಟಿ ಸಂಪಿಗೆಕೋಡಿ, ಅಜಯ್ ಶೆಟ್ಟಿ, ಧನಂಜಯ, ವಸಂತ ಶೆಟ್ಟಿ, ಬಾಲಕೃಷ್ಣ, ಪದ್ಮನಾಭ ಗೌಡ, ಪದ್ಮನಾಭ ನಾಯ್ಕ, ಜಯಂತ ಕಟ್ಟೆ, ಲೊಕೇಶ್ ನಾಯ್ಕ, ರಾಜಶೇಖರ್ ಶೆಟ್ಟಿ, ಸುರೇಶ್ ಆಚಾರ್ಯ, ಗಿರೀಶ್ ಬಾಗ್ಲೋಡಿ, ಶಿವಪ್ಪ ನಾಯ್ಕ ಪೆರ್ನೆ, ಐತ್ತಪ್ಪ ಭಂಡಾರಿ ಮೇಗಿನಮನೆ, ಗಂಗಾಧರ ರೈ, ಶ್ರೀಧರ ಗೌಡ, ಸುರೇಶ್ ಆಚಾರ್ಯ ಬಿಳಿಯೂರು, ಮಹೇಶ್ ಪಡಿವಾಳ್ ಬಿಳಿಯೂರುಗುತ್ತು, ಮುತ್ತಪ್ಪ ಸಾಲ್ಯಾನ್ ಹನುಮಾಜೆ, ರಾಜಶೇಖರ ಶೆಟ್ಟಿ ಹಿರುಬೈಲು, ವಿಜೇತ್ ರೈ ಪಟ್ಟೆಜಾಲು, ವೇಣುಗೋಪಾಲ ಶೆಟ್ಟಿ ಪಟ್ಟೆಜಾಲು, ಸದಾಶಿವ ಶೆಟ್ಟಿ ವಂಜನಪಳಿಕೆ ಮತ್ತಿತರರು ಉಪಸ್ಥಿತರಿದ್ದರು.
ಧನ್ಯತಾ ಭಾವ ಮೂಡಿಸಿದ ಬ್ರಹ್ಮಕಲಶ
ಕಳೆಂಜ- ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಸಮಿತಿಯ ಪ್ರಮುಖರು, ಸ್ವಯಂಸೇವಕರು ಬಂದ ಭಕ್ತಾದಿಗಳಿಗೆ ನೀಡಿದ ಗೌರವಾದರಗಳ ಆತಿಥ್ಯ, ತೋರಿದ ಪ್ರೀತಿ, ಅಲ್ಲಿನ ಅಚ್ಚುಕಟ್ಟು, ಶಿಸ್ತು, ಸ್ವಚ್ಛತೆ ಹಾಗೂ ಅವರ ಐಕ್ಯತೆ ಇವೆಲ್ಲವೂ ಧನ್ಯತಾ ಭಾವನೆ ಮೂಡಿಸಿದೆ ಎಂಬಂತಹ ಹೊಗಳುವಿಕೆಯ ಮಾತುಗಳು ಪರವೂರ ಭಕ್ತಾದಿಗಳಿಂದ ಕೇಳಿ ಬಂತು. `ನಿಮ್ಮ ಮನೆಯಂಗಳದಲ್ಲೊಂದು ಹಣ್ಣಿನ ಗಿಡವನ್ನು ನೆಡಿ. ನಾಳೆ ಅದು ಮರವಾಗಿ ಬೆಳೆದಾಗ ನೆರಳಾಗಿ, ಪ್ರಾಣಿಪಕ್ಷಿಗಳಿಗೆ ಆಸರೆಯಾಗಿ, ಭವಿಷ್ಯದ ಕುಡಿಗಳಿಗೆ ರಸಭರಿತ ಹಣ್ಣಿನ ಸ್ವಾದವನ್ನು ನೀಡುತ್ತದೆ’ ಎಂಬ ಕಲ್ಪನೆಯೊಂದಿಗೆ ಅತಿಥಿಗಳಿಗೆ ಹಣ್ಣಿನ ಗಿಡಗಳನ್ನು ನೀಡಿದ ದೇವಾಲಯದ ಸಮಿತಿಯ ಕಾರ್ಯವು ಮಾದರಿಯಾಗಿ ಕಂಡು ಬಂತು.