ಸವಣೂರು ವಿದ್ಯಾರಶ್ಮಿಯಲ್ಲಿ ವಿಜ್ಞಾನ ರಶ್ಮಿ

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ಗ್ರಾಮೀಣ ವಿಜ್ಞಾನ ಮೇಳ “ವಿಜ್ಞಾನ ರಶ್ಮಿ” ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಅವರು ಉದ್ಘಾಟಿಸಿ, ಮಾತನಾಡಿ ವಿಜ್ಞಾನ ನಮ್ಮ ನೈಮಿತ್ತಿಕ ಜೀವನದ ಅಂಗವಾಗಿರುವ ಕಾರಣದಿಂದ ಅದನ್ನು ಅರಿತುಕೊಂಡಾಗ ಕಲಿಕೆ ಆಸಕ್ತಿದಾಯಕ ಆಗುತ್ತದೆ. ಅದಕ್ಕಾಗಿಯೇ ಈ ಮೇಳವನ್ನು ಏರ್ಪಡಿಸಲಾಗಿದೆ ಎಂದರು.

ಮುಖ್ಯ ಅತಿಥಿ ದೋಲ್ಪಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಶಶಿಧರ್ ಅವರು ಮಾತನಾಡಿ ವಿಜ್ಞಾನದ ಮಹತ್ವವನ್ನು ಸಾರುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಹಾಗೂ ಇದನ್ನು ಆಯೋಜಿಸಿದ ವಿದ್ಯಾರಶ್ಮಿ ಸಂಸ್ಥೆ ಅಭಿನಂದನಾರ್ಹ ಎಂದರು.

ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಫಾತಿಮತ್ ಶಮ್ನಾ ಕಾರ್ಯಕ್ರಮ ನಿರೂಪಿಸಿದರು. ಸಾನ್ವಿ ಪಿ ರೈ, ತೃಷಾ ಮತ್ತು ನಿಶಾ ರೈ ಪ್ರಾರ್ಥನೆ, ಪ್ರಣವ್ ಸ್ವಾಗತ, ಜಶ್ಮಿತಾ ಸಂವಿಧಾನದ ಪೀಠಿಕೆ ವಾಚನ, ನಿಶಾಂತ್ ಧನ್ಯವಾದ ಸಮರ್ಪಣೆ ನಿರ್ವಹಿಸಿದರು.

ವಿದ್ಯಾರಶ್ಮಿ ವಿದ್ಯಾಲಯದ ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ, ಉಪ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ, ಸಂಯೋಜಕಿ ಕಸ್ತೂರಿ ಕೆ. ಜಿ. ಉಪಸ್ಥಿತರಿದ್ದರು.

ಹನ್ನೊಂದು ಶಾಲೆಯ 82 ಮಕ್ಕಳು ಭಾಗವಹಿಸಿದ್ದು ಅವರಿಗಾಗಿ ರಸಪ್ರಶ್ನೆ, ಭಾಷಣ, ಔಷಧೀಯ ಸಸ್ಯಗಳ ಗುರುತಿಸುವಿಕೆ, ವಿಜ್ಞಾನ ಮಾದರಿ ತಯಾರಿ ಮತ್ತು ಕಂಪ್ಯೂಟರ್ ಟೈಪಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here