ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಮರೀಲು ಸ್ನೇಹನಗರ ಇಲ್ಲಿನ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಡಿ.31 ರಂದು ಸಂಜೆ ಮರೀಲು ಸ್ನೇಹನಗರದ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆಯಲ್ಲಿ ಜರಗಿತು.
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರಾದ ಕೃಷ್ಣ ಭಟ್‌ರವರ ನೇತೃತ್ವದಲ್ಲಿ ಮಹಾಪೂಜೆಯೊಂದಿಗೆ ಪೂಜಾವಿಧಿ ನೆರವೇರಲ್ಪಟ್ಟಿತು. ಸಂಜೆ ಕಾವು ಮಾಣಿಯಡ್ಕ ಶ್ರೀ ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿ ಇವರಿಂದ ಭಜನೆ, ರಾತ್ರಿ ಕಲಾ ತಪಸ್ವಿ ಸಾಂಸ್ಕೃತಿಕ ತಂಡ ಇವರಿಂದ ಹಾಡು, ನೃತ್ಯ, ಜಾದೂ, ಯಕ್ಷಗಾನ, ಪ್ರಹಸನ, ಶಾಡೋ ಪ್ಲೇ, ಸ್ಯಾಕ್ಸೋಫೋನ್ ಹಾಗೂ ಅಮೋಘ ಮನರಂಜನಾ ಕಾರ್ಯಕ್ರಮವು ಮನ ಸೆಳೆಯಿತು.
ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಮನೋಜಿತ್, ಗೌರವಾಧ್ಯಕ್ಷ ರಾಜೇಂದ್ರ ಕೆ.ಮೆಸ್ಕಾಂ, ಕಾರ್ಯದರ್ಶಿ ಕಾರ್ತಿಕ್ ಸಂಜಯನಗರ, ಕೋಶಾಧಿಕಾರಿ ಹರೀಶ್ ರೈ, ನಗರಸಭೆ ಸದಸ್ಯ ಬಾಲಚಂದ್ರ ಕೆ., ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಪೂವಪ್ಪ ದೇವಾಡಿಗ ಕೆಮ್ಮಿಂಜೆ, ಮೋಹನ್ ನಾಯ್ಕ ಮರೀಲು, ಭಾಸ್ಕರ ಮರೀಲು, ಸುರೇಶ್ ಪ್ರಗತಿ ಲೇಔಟ್, ಅನೀಶ್ ಕುಮಾರ್ ಮರೀಲು, ಕಾರ್ತಿಕ್ ಹೆಗ್ಡೆ, ಶಿವಕುಮಾರ್ ಹೆಗ್ಡೆ, ದೀಕ್ಷಿತ್ ಹೆಗ್ಡೆ, ಹರೀಶ್, ಯುರೇಶ್, ಭರತ್ ಹೆಗ್ಡೆ, ಕೀರ್ತಿಕ್, ಸುಮನ್ ಪಳಿಕೆ, ಸಂದೀಪ್ ಕಾಡುಮನೆ, ರಕ್ಷಿತ್ ಕಾಡುಮನೆ, ಧನುಷ್ ನಾಯ್ಕ್, ಕೌಶಿಕ್, ಕೃತಿಕ್, ಅಖಿಲೇಶ್ ಕೆ.ಎಲ್ ಗೌಡ, ಸೂರ‍್ಯಕುಮಾರ್ ಕ್ಯಾಂಪ್ಕೋ, ನವೀನ್ ಕ್ಯಾಂಪ್ಕೋ ಪ್ರಗತಿ ಲೇಔಟ್, ನವೀನ್ ನಾಯ್ಕ್, ಭವಾನಿಶಂಕರ, ಸುಧಾಕರ,ರವೀಶ್ ಕಾಡುಮನೆ, ಮೋಹನ್ ರಾವ್ ಕಾಡುಮನೆ, ವಿನೋದ್ ಬೆಂಗಳೂರು ,ಶ್ಯಾಮ್‌ಸುಂದರ್ ಸಹಿತ ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದು, ಅನ್ನಪ್ರಸಾದವನ್ನು ಸ್ವೀಕರಿಸಿದರು.