ಸುದ್ದಿ ಸಸ್ಯ ಜಾತ್ರೆಯಲ್ಲಿ ಇಂದು (ಜ.8) ನಡೆಯಲಿರುವ ವಿಚಾರ ಸಂಕಿರಣಗಳು ಮತ್ತು ತಜ್ಞರ ವಿವರ

0

ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಜಿ.ಪಂ,ತಾ.ಪಂ, ನಗರಸಭೆ, ವಿವಿಧ ಒಕ್ಕೂಟಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನ ನಡೆಯುತ್ತಿರುವ ಸಸ್ಯ ಜಾತ್ರೆಯಲ್ಲಿ ಜ.8ರಂದು (ಇಂದು) ನಡೆಯಲಿರುವ  ಕೃಷಿ ವಿಚಾರ ಸಂಕಿರಣಗಳ ಮಾಹಿತಿ ಈ ಕೆಳಗಿನಂತಿದೆ.
 ಬೆಳಿಗ್ಗೆ ೧೦:೦೦ – ೧೦.೫೦
ಅಡಿಕೆ ಕಾಯಿಲೆಗಳ ತಡೆ
ಡಾ. ಎನ್.ಆರ್. ನಾಗರಾಜ್


ವಿಜ್ಞಾನಿ, ICAR &  CPCRIಐ ಪ್ರಾಂತೀಯ ಕೇಂದ್ರ ವಿಟ್ಲ

ಬೆಳಿಗ್ಗೆ ೧೧ – ೧೨.೧೫
ಅಡಿಕೆಗೆ ಪರ್ಯಾಯ ವಾಣಿಜ್ಯ ಬೆಳೆಗಳು, ಸಾಂಬಾರ ಬೆಳೆಗಳು- ಡಾ. ಡಿ ಚಂದ್ರಶೇಖರ ಚೌಟ


ಡಾ. ದರ್ಬೆ ಚಂದ್ರಶೇಖರ ಚೌಟ ಇವರು ಓರ್ವ ಕೃಷಿವಿಜ್ಞಾನಿ ಹಾಗೂ ತಳಿವಿಜ್ಞಾನ ಸಂಶೋಧಕ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಇವರ ಹುಟ್ಟೂರು. ಇವರು ಬಾಂಬೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ತಳಿವಿಜ್ಞಾನದ ಜೀವ ವೈವಿಧ್ಯ ಪರಿಸರ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಕೃಷಿ ಅಭಿವೃದ್ಧಿಗಾಗಿ ಬಹುರೂಪಿ ಪ್ರಯೋಗಗಳನ್ನು ಮಾಡಿದ್ದಾರೆ. ಅಣಬೆ ಕೃಷಿ ಹಾಗೂ ಸಿಹಿ ನೀರಿನ ಮೀನು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕರ್ನಾಟಕದಲ್ಲಿ ಮೊತ್ತಮೊದಲನೆಯದಾಗಿ ಸಿಹಿ ನೀರಿನ ಮೀನು ಸಾಕಣೆಯನ್ನು ಆರಂಭಿಸಿದರು. ಕುಟುಂಬದೊಂದಿಗೆ ಮೀಂಜ ಗ್ರಾಮದಲ್ಲಿ ಕೃಷಿಯನ್ನು ಅಭಿವೃದ್ಧಿ ಪಡೆಸಲು ವಿವಿಧ ಪ್ರಯೋಗಗಳನ್ನು ನಡೆಸಿದ್ದಾರೆ.

ವೇಣುಗೋಪಾಲ್ ಎಸ್.ಜೆ. ನವನೀತ್ ನರ್ಸರಿ, ಪುತ್ತೂರು ಮತ್ತು ಹೆಬ್ರಿ


ರೈತರಿಗೆ ಉತ್ತಮವಾದ ನಾಟಿ ಮಾಡುವ ಉzಶದಿಂದ ಅವರು ನರ್ಸರಿಯನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಿದ್ದಾರೆ, ಹೆಚ್ಚಿನ ಇಳುವರಿ ನೀಡುವ ಗೋಡಂಬಿ, ಕೋಕೋ, ಅಡಿಕೆ, ಕರಿಮೆಣಸು, ತೆಂಗು, ಮಾವು ಮತ್ತು ಸಪೋಟ ಗಿಡಗಳನ್ನು ತಯಾರಿಸಿ ಪೂರೈಸುತ್ತಿದ್ದಾರೆ. ರೈತರಿಗೆ ನೇರವಾಗಿ, ಎನ್‌ಜಿಒಗಳ ಮೂಲಕ ಮತ್ತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ ಮತ್ತು ಮೇಘಾಲಯ ರಾಜ್ಯಗಳ ತೋಟಗಾರಿಕೆ ಇಲಾಖೆಗಳ ಮೂಲಕ ಗುಣಮಟ್ಟದ ನಾಟಿ ತಳಿ ಸಸಿಗಳನ್ನು ತಯಾರಿಸಿ ಪೂರೈಕೆ ಮಾಡಲಾಗುತ್ತಿದೆ. ಪ್ರಸ್ತುತ ಆಯ್ದ ತಳಿಗಳಾದ ಅಡಿಕೆ, ತೆಂಗಿನಕಾಯಿ, ಗೋಡಂಬಿ, ಮೆಣಸು, ಮಾವು, ಸಪೋಟ, ಹಲಸು, ಜಾಯಿಕಾಯಿ, ಬಾಳೆಹಣ್ಣು, ಪಪ್ಪಾಯಿಗಳನ್ನು ಉತ್ಪಾದಿಸಲಾಗುತ್ತಿದೆ.

ರಮೇಶ್ ಕಲ್ಪುರೆ,


ಕಡಬ ಸಿಎ ಬ್ಯಾಂಕ್‌ ಅಧ್ಯಕ್ಷರಾಗಿರುವ ಇವರು ಅಡಿಕೆಗೆ ಪರ್ಯಾಯ ಬೆಳೆಯಾಗಿ ರಂಬೂಟಾನ್‌ಕೃಷಿ ಮಾಡುತ್ತಿದ್ದಾರೆ. ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ರಬ್ಬರ್‌ಸೊಸೈಟಿಯ ನಿರ್ದೇಶಕರೂ ಆಗಿರುತ್ತಾರೆ.

ಅಜಿತ್ ಶೆಟ್ಟಿ ಕಡಬ

ª
ಕೃಷಿಯಲ್ಲಿ ತೆಂಗು, ಅಡಿಕೆ, ರಬ್ಬರ್‌ಸಮಗ್ರ ಕೃಷಿಯೊಂದಿಗೆ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ವಿಶೇಷವಾಗಿ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ತಳಿಗಳ ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ತೋಟದಲ್ಲಿವೆ. ರಂಬೂಟಾನ್, ಮ್ಯಾಂಗೊಸ್ಟಿನ್, ಅನನಾಸು ಇತ್ಯಾದಿ ಹಣ್ಣುಹಂಪಲುಗಳ ತೋಟ ಕೃಷಿ ಮಾಡುತ್ತಿದ್ದಾರೆ. ಕೃಷಿ ಅಧ್ಯಯನ ಪ್ರವಾಸ ಕೈಗೊಂಡು ಮಾಹಿತಿ ಸಂಗ್ರಹಿಸಿ ತನ್ನ ತೋಟದಲ್ಲಿ ಪ್ರಯೋಗಾತ್ಮಕವಾಗಿ ಯಶಸ್ಸು ಕಂಡಿದ್ದಾರೆ. ನಾಟಿಕೋಳಿ ಸಾಕಾಣಿಕೆಯ ಉದ್ಯಮವೂ ಇವರಲ್ಲಿದೆ.

ಮಧ್ಯಾಹ್ನ ೧೨.೩೦ ರಿಂದ ೧.೦೦ ಜೇನುಕೃಷಿ, ರಾಧಾಕೃಷ್ಣ ಕೋಡಿ


ರಾಜ್ಯಮಟ್ಟದ ಉತ್ತಮ ಜೇನು ಕೃಷಿ ತರಬೇತುದಾರರಾಗಿರುವ ಇವರು ಸಾವಿರಕ್ಕೂ ಮಿಕ್ಕಿ ತರಬೇತಿ ನೀಡಿದ್ದಾರೆ. ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ಕೆವಿಕೆ ಮಂಗಳೂರು, ರುಡ್‌ಸೆಟ್‌ಧರ್ಮಸ್ಥಳ ಮತ್ತಿತರ ಕಡೆ ತರಬೇತುದಾರನಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಇವರ ಜೇನು ಕೃಷಿ ಮತ್ತು ತರಬೇತಿಯ ಹಿನ್ನೆಲೆಯಲ್ಲಿ ೨೦೧೮-೧೯ನೇ ಸಾಲಿನ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮನಮೋಹನ್ ಅರಂಬ್ಯ


ಆಸಕ್ತ ಜೇನು ಕೃಷಿಕರಿಗೆ ಕಡಿಮೆ ದರದಲ್ಲಿ ಜೇನು ಕುಟುಂಬಗಳ ಮಾರಾಟ ಮತ್ತು ಉಚಿತ ಸಲಹೆ ಮತ್ತು ಸೇವೆ ಸಲ್ಲಿಸುತ್ತಿರುವ ಮನಮೋಹನ ಅರಂಬ್ಯವರು ಪ್ರತಿ ವರ್ಷವು ಜೇನು ಕೃಷಿಯ ತರಬೇತಿಯಲ್ಲಿ ಸುಮಾರು ೨೦ ತಂಡಗಳಿಗೆ ಪ್ರಾತ್ಯಕ್ಷಿಕಾ ತರಬೇತಿಯ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ. ತಳಿ ಸುಧಾರಣೆಗೆ ಅತ್ಯುತ್ತಮ ರಾಣಿಯನ್ನು ಪಡೆಯುವಲ್ಲಿ ಗ್ರಾಪ್ಟಿಂಗ್ ಮೂಲಕ ತಳಿ ಸುಧಾರಣೆ. ವಿಶೇಷವಾಗಿ ಮೊಜಂಟಿ ಜೇನು ಸಾಕಾಣಿಕೆ ಮತ್ತು ತರಬೇತಿ ನೀಡುವಿಕೆ. ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂನಲ್ಲಿ ನಡೆದಿರುವ ಐಟqZಠಿಜಿಟ್ಞ ಊಛಿoಠಿಜಿqZ ನಡೆದ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಜೇನುಕೃಷಿ ಸಾಕಾಣಿಕೆಯ ಮಾಹಿತಿ ನೀಡುತ್ತಾ ಬಂದಿದ್ದಾರೆ.

ಅಪರಾಹ್ನ ೧.೦೦ ರಿಂದ ೧.೩೦
ಅಕ್ವೇರಿಯಂ, ಶಶಿಕುಮಾರ್ ಕಾರ್ಕಳ


ಮತ್ಸ್ಯ ಕನ್ಯ ಅಕ್ವಾ ಫಾರ್ಮ್ ಅನಿಮಲ್ ಕೇರ್
ಎಣ್ಣೆಹೊಳೆ ಕಾರ್ಕಳ , ಉಡುಪಿ

ಅಪರಾಹ್ನ ೨ – ೨:೪೦ ಹಣ್ಣಿನ ಗಿಡಗಳು

ಅನಿಲ್ ಬಳಂಜ


ಹವ್ಯಾಸವಾಗಿ ಹಣ್ಣಿನ ಗಿಡಗಳನ್ನು ನೆಡಲು ಆರಂಭಿಸಿದ ಇವರು ಪ್ರಸ್ತುತ ೨೫ ಎಕರೆ ಜಮೀನಿನಲ್ಲಿ ೭೦೦ ರಷ್ಟು ಅಧಿಕ ವಿದೇಶಿ ಹಾಗೂ ಸ್ವದೇಶಿ ಹಣ್ಣುಗಳ ಸಂಗ್ರಹ, ೩೦-೪೦ ವಿವಿಧ ದೇಶಗಳ ಹಣ್ಣಿನ ಗಿಡಗಳ ಸಂಗ್ರಹಣೆ ಮಾಡಿರುತ್ತಾರೆ. ಬ್ರೆಜಿಲ್‌ಹಾಗೂ ಮಲೇಷ್ಯಾದ ಹಣ್ಣಿನ ಗಿಡಗಳನ್ನು ನೆಟ್ಟು ನಮ್ಮ ಮಣ್ಣಿನಲ್ಲಿ ಫಲ ತೆಗೆದ ಮೊದಲಿಗರಾಗಿದ್ದಾರೆ. ಇವರ ಸಾಧನೆಗೆ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಗಾರ್ಸೆನಿಯಾ ಕುಟುಂಬದ ಗಿಡದ ಕಲೆಕ್ಷನ್‌ಗೆ ಅಪರೂಪದ ಸರ್ಟಿಫಿಕೇಟ್‌ಪಡೆದುಕೊಂಡಿದ್ದಾರೆ.

ಅಪರಾಹ್ನ ೨:೪೫ – ೪:೩೦
ಕೃಷಿ ಉತ್ಪಾದನೆಗಳ ಮೌಲ್ಯವರ್ಧನೆ

ಗಿರೀಶ್ವರ್ ಭಟ್  ಬಾಳೆಗುಳಿ ಇರ್ದೆ

ಸಮಗ್ರ ಕೃಷಿಯೊಂದಿಗೆ ಅಣಬೆ ಕೃಷಿ

ರಾಧಾಕೃಷ್ಣ ಇಟ್ಟಿಗುಂಡಿ – ನಿತ್ಯ ಫುಡ್‌ಪ್ರಾಡಕ್ಟ್


ಅಣಬೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ

ಸುಹಾಸ್ ಮರಿಕೆ ಮರಿಕೆ ಒರ್ಗಾನಿಕ್ ಪ್ರೋಡಕ್ಟ್ಸ್

ಚೇತನ್ ಎ., ತೆಂಗು ಬೆಳೆಗಾರರ ಸಂಘ (ಎಫ್‌ಇಒ)

ಆಮ್ಲೀಕೃತ ಆಹಾರಗಳು, ಚಾಕೋಲೇಟ್‌ಗಳು, ಪೌಷ್ಠಿಕಾಂಶದ ಪ್ರೊಟೀನ್‌ಹುಡಿಗಳ ತಯಾರಿಕೆಯಲ್ಲಿ ಕ್ಯಾಡ್‌ಬರಿ ಕಂಪೆನಿ, ಗ್ಲೋಬಲ್‌ಗ್ರೀನ್‌ಕಂ., ಪರ್ಸೋನ್ಸ್‌ನ್ಯೂಟ್ರಿಷಿಯನಲ್ಸ್‌ಪ್ರೈ. ಲಿ. ಹಾರ್ನಹಳ್ಳಿ ಕಂಪೆನಿಗಳಲ್ಲಿ ಪ್ರೊಡಕ್ಷನ್‌ಮೆನೇಜರ್‌ಆಗಿ ಕರ್ತವ್ಯ ನಿರ್ವಹಿಸಿದವರು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಪರಿಣತಿಯನ್ನು ಪಡೆದವರು.

ರಾಮ ಕಿಶೋರ್ ಕೆ.
ಹಲಸು, ಬಾಳೆಹಣ್ಣು, ಅಡಿಕೆ ಖರೀದಿ ಮತ್ತು ಮಾರಾಟದ ಮೌಲ್ಯವರ್ಧನೆ, ಅಡಿಕೆ ಕೊಯ್ಲು ಮತ್ತು ರಾಸಾಯನಿಕಗಳನ್ನು ಸಿಂಪಡಿಸುವುದು, ತೆಂಗಿನಕಾಯಿ ಕೊಯ್ಲು ಇತ್ಯಾದಿಗಳಿಗೆ ಕಾರ್ಮಿಕರನ್ನು ಒದಗಿಸುತ್ತಾರೆ. ಸಿಪಿಸಿಆರ್‌ಐ ಅತ್ಯುತ್ತಮ ಅಡಿಕೆ ಕೃಷಿಕ, ಮುಖ್ಯಮಂತ್ರಿಗಳಿಂದ ಉತ್ತಮ ಎಫ್‌ಪಿಒ ಪ್ರಶಸ್ತಿ ಲಭಿಸಿದೆ.

ಗೋಷ್ಠಿ ಸಮಾಪ್ತಿ
ಸೇಡಿಯಾಪು ಜನಾರ್ದನ ಭಟ್ –

ಪ್ರಗತಿಪರ ಕೃಷಿಕರು ಬನ್ನೂರು ಶ್ರೀ ಸದಾಶಿವ ತೀರ್ಥ ಕೆರೆ ಪುನಶ್ಚೇತನ ಮಾಡಿದ ಸಮಿತಿಯಲ್ಲಿ ಮುಂಚೂಣಿಯಲ್ಲಿದ್ದವರು. ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ತಂದವರು ಕೃಷಿ ಅಂದಾಕ್ಷಣ ‘ಸೇಡಿಯಾಪು‘ ಎಂದು ಹೆಸರು ನೆನಪಾಗುವಷ್ಟರ ಮಟ್ಟಿಗೆ ಇವರ ಹೆಸರು ಪ್ರಸಿದ್ಧಿಯಾಗಿದೆ-

ಎನ್. ವೆಂಕಟಕೃಷ್ಣ ಶರ್ಮ ಪ್ರಗತಿಪರ ಕೃಷಿಕರು

ಸಸ್ಯ ಜಾತ್ರೆಯಲ್ಲಿರುವ ಸ್ಟಾಲುಗಳು:-
೧ ಸುದ್ದಿ ಮಾಹಿತಿ
೨ ಸುದ್ದಿ ಕೃಷಿ ಮಾಹಿತಿ
೩ ಸಾನಿಕ ನರ್ಸರಿ
೪ ಸಾನಿಕ ನರ್ಸರಿ
೫, ೬ ಊರಿನ ತರಕಾರಿ ಬೀಜ
೭ ಅಕ್ಷಯ ಕಾಲೇಜ್ ಪುತ್ತೂರು
ಂ ಪಿಲಿಪ್ಸ್ ಮಲ್ಟಿಪರ್ಪಸ್ ಆಗ್ರೋ ಸ್ಪ್ರೇಯರ್
೮ ಡಾ. ಸಾಯಿಲ್
೯ ಆತ್ಮಭವ್ ಆರ್ಗಾನಿಕ್
ಃ ಕುಂಬಾರ ಮಣ್ಣಿನ ಮಡಿಕೆ
೧೦ ಕ್ಷಿತಿಜಾ ಎಂಟರ್‌ಪ್ರೈಸಸ್
೧೧, ೫೧ ಪ್ರಥಮ್ ಸೀಡ್ಸ್
೧೨ ಸಂಪ್ರೀತ್ ಆರ್ಗಾನಿಕ್
೧೩ ಶ್ರೀ ಉಳ್ಳಾಲ್ತಿ ಅಲೋವೆರಾ ನರ್ಸರಿ
೧೪ ಸಾಯ ಎಂಟಪ್ರೈಸಸ್ (ಅಗ್ರಿಮಾರ್ಟ್) ಎಪಿಎಂಸಿ ಪುತ್ತೂರು
೧೫ ಸುದ್ದಿ ಸೊಸೈಟಿ
೧೬ ಜೇನು ಮಾಹಿತಿ
೧೭ ಗ್ರೀನ್ ವರ್ಲ್ಡ್ ನರ್ಸರಿ
೧೮, ೧೯, ೨೦, ೨೧ ಆಕರ್ಷಣ್ ಮುಕ್ರಂಪಾಡಿ ಪುತ್ತೂರು
೨೨ ಹ್ಯಾಂಡ್ ಮೇಡ್ ಕ್ಲೋತ್ ಸೆಂಟರ್
೨೩ ಕೃಷಿ ಏಜೆನ್ಸಿಸ್
ಅ ಸಂಜೀವಿನಿ ಗಾರ್ಡನ್ ಮಂಗಳೂರು
೨೪ ಹೋಮ್ ಗ್ರೌಂಡ್ ಬಯೋಟೆಕ್ ಕೇರಳ
೨೫ ಶಿವಶಕ್ತಿ ಹೋಮ್ ಅಪ್ಲೈಯನ್ಸ್
ಆ ವಾರಣಾಸಿ ಸಾವಯವ ಗೊಬ್ಬರ
೨೬ ವಾಟರ್ ವಿಂಗ್ಸ್ ಟೆಕ್ನಾಲಜಿ
೨೭ ಕೈಲಾರ್ ನ್ಯಾಚುರಲ್ ಐಸ್‌ಕ್ರೀಮ್
೨೮ ಆದಿತ್ಯ ಹರ್ಬಲ್ಸ್
೨೯ ಕುಂಬಾರರ ಗುಡಿ ಕೈಗಾರಿಕೆ
೩೦ ಅವೆಂಚುರ ಆರ್ಗಾನಿಕ್
೩೧ ಶ್ರೀಲಕ್ಷ್ಮಿ ಹರ್ಬಲ್ಸ್
೩೨ ಗ್ರೀನ್ ವರ್ಲ್ಡ್ ನರ್ಸರಿ
೩೩ ಯಶ್ವಿ ಸಂಜೀವಿನಿ ಹರ್ಬಲ್
೩೪ ತೋಟಗಾರಿಕೆ
೩೫ ಮೀನುಗಾರಿಕೆ
೩೬ ಫಿಶ್ ಅಕ್ವೇರಿಯಂ
೩೭ ಫಿಶ್ ಅಕ್ವೇರಿಯಂ
೩೮ ಗೇರು ಅಭಿವೃದ್ಧಿ ನಿರ್ದೇಶನಾಲಯ
೩೯ ದ.ಕ. ಜೇನು ವ್ಯ. ಸ.ಸಂಘ ಪುತ್ತೂರು
ಇ ನಾಟ್ ಸಾರ್ಫ್ ಆರ್ಗಾನಿಕ್
೪೦, ೪೧ ಪಿಲಿಕುಳ
೪೩ ಬಿ.ಹೆಚ್. ಸ್ಟೋರ್
೪೪ ಲೆಮನ್ ವೆಜಿಟೇಬಲ್ ಕಟ್ಟರ್
೪೫ ಸಿಂಗಾರ ಕೃಷಿ
೪೬
೪೬ ನಿತ್ಯ ಫುಡ್ ಪ್ರಾಡಕ್ಟ್
೪೭ ಜ್ಯುವೆಲ್ಲರಿ ಶಾಪ್
೪೮ ಪಿಆರ್ ಕೆ ಲ್ಯಾಡರ್
೪೯ ಫ್ಲೋರ ಫೋರ್ಟ್ ನರ್ಸರಿ
೫೦ ನಿತ್ಯಾನಂದ ಆಗ್ರೋ ಲಿಮಿಟೆಡ್
ಉ, ಈ, ೫೭ ಬಿ.ಎಚ್. ಸ್ಟೋರ್
೫೧ ಪ್ರಥಮ್ ಸೀಡ್ಸ್
೫೨ ಯಶಸ್ವಿನಿ ನರ್ಸರಿ
೫೩, ೫೪ ಚಪ್ಪಲ್ ಶಾಪ್
೫೫ ನ್ಯಾಚುರಲ್ ಲೆಮನ್ ಜ್ಯೂಸ್
೫೬ ಮಂಜು ಎಂಟರ್‌ಪ್ರೈಸಸ್
ಊ ಶೂ ರಾಕ್
೫೯ ಅರಣ್ಯ ಹರ್ಬಲ್ಸ್
೬೦ ಉಡುಪಿ ಹಟ್ ಪ್ರೈ ಮಸಾಲ
೬೧
೬೨, ೬೩, ೬೪ ಪೂರ್ಣಿಮಾ ಟೆಕ್ಸ್‌ಟೈಲ್ಸ್
೬೫ ನವನೀತ್ ನರ್ಸರಿ
೬೬ ನವನೀತ್ ನರ್ಸರಿ
೬೭ ಅಕ್ಷಾ ಕೋಟೆ ಇಂಡಸ್ಟ್ರೀಸ್
೬೮ ಕ್ಯಾಂಡಿಮನ್ & ಹೋಂ ಪ್ರಾಡಕ್ಟ್
೬೯ ಕ್ಯಾಂಡಿಮನ್ & ಹೋಂ ಪ್ರಾಡಕ್ಟ್
೭೦ ಶ್ರಮ ಹೋಂ ಪ್ರಾಡಕ್ಟ್
೭೧ ಬಟ್ಟೆ ಅಂಗಡಿ
೭೨ ಕುದಿಂಜಾಳ ಗ್ರಾಮೀಣ ನ್ಯಾಚುರಲ್ಸ್
೭೩ ಮಡ್ಕಾ ಸೋಡಾ
೭೪ ಪ್ರವೀಣ್ ತಿಂಡಿ ಮನೆ
೭೫ ಮರಿಕೆ ನ್ಯಾಚುರಲ್ ಐಸ್‌ಕ್ರೀಮ್
೭೬ ಬನಾನ ಚಿಪ್ಸ್
೭೭ ಶ್ರೀಕೃಷ್ಣ ಸೋಡಾ
೭೮ ಹಲಸಿನ ಹಣ್ಣಿನ ಹೋಳಿಗೆ
೭೯, ೮೦ ಸ್ವೀಟ್ ಕಾರ್ನ್ ಟ್ವಿಸ್ಟರ್
೮೧ ಮೊಮೊಸ್ & ಮಿಲ್ಕ್ ಶೇಕ್
೮೨, ೮೩ ಸಂಜೀವಿನಿ ಒಕ್ಕೂಟ
೮೪ ಶ್ರೀಕೃಷ್ಣ ಜ್ಯೂಸ್
೮೭ ಪ್ರಭು ಚರುಂಬುರಿ
೮೮ ಪ್ರಭು ಚಾರ್ಟ್ಸ್
೮೯ ನೆನಪಿರಲಿ ಜ್ಯೂಸ್ ಸೆಂಟರ್
೯೦ ಈಝಿ ಸ್ಕೇಲ್ ಬಜಾರ್
೯೧ ಬೆಸ್ಟ್ ಕ್ವಾಲಿಟಿ
೯೨ ಊರಿನ ತರಕಾರಿ ಬೀಜ
೯೩ ಎಲ್.ಏನ್.ಟಿ. ಲಾಡರ್ಸ್
೯೪ ಎವಿಜಿ ಚಾಂದಿನಿ ನರ್ಸರಿ
೯೫ ಸಿರಿಭೂಮಿ ಮಡಿಕೆ
೯೬, ೯೭ ನಿನ್ನಿಕಲ್ಲು ನರ್ಸರಿ
೯೮ ಆಟೋಮೆಟ್ರಿಕ್ಸ್ ಪುತ್ತೂರು
೯೯ ಬೋನ್ಸಯ್ ನರ್ಸರಿ
೧೦೦ ಎಂಪೈರ್ ಸ್ಕೂಟರ್
೧೦೧ ಬ್ಯಾಂಕ್ ಆಫ್ ಬರೋಡ
೧೦೨ ಕಾಸ್ಸ್ಟೈಲ್ ಇ ಬೈಕ್ ಎಲೆಕ್ಟ್ರಿಕ್ ಟು ವೀಲರ್
೧೦೩ ಎಸ್.ಎಸ್. ಸ್ಕೇಲ್ ಬಜಾರ್ ಪುತ್ತೂರು
೧೦೪ ಟಿ.ವಿ. ಕ್ಲಿನಿಕ್
೧೦೫ ಜಲ ವಿಷನ್
೧೦೬ ಭಾರತ್ ಕಾರ್
ಎ – ಭಾರತ್ ಕಾರ್
೧೦೭, ೧೦೮ ನೇತ್ರಾವತಿ ನರ್ಸರಿ
೧೦೯ ಎಂ.ಜಿ.ಎಸ್. ನರ್ಸರಿ
೧೧೦ ಎಂಜಿಎಸ್ ಆಗ್ರೋ
೧೧೧ ಐಸಿರಿ ಆಗ್ರೋ
೧೧೨ ಎಸ್.ಆರ್.ಕೆ. ಲ್ಯಾಡರ‍್ಸ್
೧೧೩ ವಿದ್ಯಾಮಾತ
೧೧೪ ಪಶುಪತಿ ಲೈಟ್
೧೧೫ ಬ್ರಹ್ಮಕುಮಾರಿ ಗೋವಿಂದ ಭಟ್ ದರ್ಬೆ
೧೧೬ ಎಸ್.ಎಂ. ಎಂಟರ್‌ಪ್ರೈಸಸ್
೧೧೭ ಬಿ.ಕೆ. ಮಲ್ಟಿಪ್ಲೆಕ್ಸ್
೧೧೮ ತೆಂಗು ಬೆಳೆಗಾರರ ಸಂಘ
೧೧೯ ಐ.ಆರ್.ಸಿ.ಎಂ.ಡಿ. ಎಜುಕೇಶನ್ ಸೆಂಟರ್
೧೨೦ ರಿಂದ ೧೩೦ರ ವರೆಗೆ ಸಂಜೀವಿನಿ ಒಕ್ಕೂಟ
೧೨೧ ಕ್ಯಾಂಪ್ಕೋ
೧೨೨ ಕೆಎಂಎಫ್ ಮಂಗಳೂರು
೧೨೩ ಕೃಷಿಬಿಂಬ ಪತ್ರಿಕೆ
೧೨೪ ಟೊಯೋಟಾ ಕಾರ‍್ಸ್
೧೨೫ ಪಶುಪತಿ ಲೈಟ್ಸ್
೧೨೬ ಕೃಷಿಕ ಬಂಧು

LEAVE A REPLY

Please enter your comment!
Please enter your name here