Saturday, February 4, 2023
Homeಗ್ರಾಮವಾರು ಸುದ್ದಿಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಅರ್ಧಏಕಹಾ ಭಜನಾ ಮಂಗಳೋತ್ಸವ: ಕಾವು ನನ್ಯ ತುಡರ್ ಯುವಕ ಮಂಡಲದಿಂದ...

ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಅರ್ಧಏಕಹಾ ಭಜನಾ ಮಂಗಳೋತ್ಸವ: ಕಾವು ನನ್ಯ ತುಡರ್ ಯುವಕ ಮಂಡಲದಿಂದ ಭಜನಾ ಸಂಕೀರ್ತನೆ

ಕಾವು: ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಡಿ ಜ.೮ರಂದು ನಡೆದ ಅರ್ಧ ಏಕಹಾ ಭಜನಾ ಮಂಗಳೋತ್ಸವದಲ್ಲಿ ಕಾವು ನನ್ಯ ತುಡರ್ ಯುವಕ ಮಂಡಲದಿಂದ ಒಂದು ಗಂಟೆಯ ಭಜನಾ ಸೇವೆ ನಡೆಯಿತು.

ಭಜನಾ ಕಾರ್ಯದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷ ಶೇಷಪ್ಪ ಗೌಡ ಪರನೀರು, ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಕೋಶಾಧಿಕಾರಿ ಹರೀಶ್ ಕೆರೆಮೂಲೆ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ನನ್ಯ, ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಗಂಗಾಧರ ನಾಯ್ಕ, ಸುನೀಲ್ ನಿಧಿಮುಂಡ, ಸದಸ್ಯರಾದ ರಾಘವ ಪಿ.ಎಸ್, ಸಂದೇಶ್ ಚಾಕೋಟೆ, ಬಾಲಕೃಷ್ಣ ಪಾಟಾಳಿ, ಹರ್ಷಿತ್ ಎ.ಆರ್, ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು. ಭಜನಾ ತಂಡಕ್ಕೆ ಕ್ಷೇತ್ರದ ಅರ್ಚಕ ಶಿವಪ್ರಸಾದ್ ಕಡಮಣ್ಣಾಯರವರು ಶ್ರೀದೇವರ ಪ್ರಸಾದ ನೀಡಿ ಪ್ರಾರ್ಥಿಸಿದರು. ಭಜನೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸದಸ್ಯರುಗಳಿಗೆ ಮಂದಿರದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು.

 

LEAVE A REPLY

Please enter your comment!
Please enter your name here

Must Read

spot_img
error: Content is protected !!