ಸಕ್ಷಮದ ದಕ್ಷಿಣ ವಲಯ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭ- ತಮಿಳುನಾಡು ರಾಜ್ಯಕ್ಕೆ ಪ್ರಥಮ ಸ್ಥಾನ

0

ಬೆಂಗಳೂರು : ಸಕ್ಷಮ ಕರ್ನಾಟಕ ಸಂಘಟನೆ ಸಂಯೋಜಿಸಿದ ದಕ್ಷಿಣ ಭಾರತ ಮಟ್ಟದ ದೃಷ್ಟಿ ಸವಾಲುಳ್ಳವರ ಚೆಸ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಜ.7 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ನಿಜಗುಣರ ಕ್ಷೇತ್ರದಲ್ಲಿ ನೆರವೇರಿತು.

ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸೇರಿದಂತೆ 6 ರಾಜ್ಯಗಳಿಂದ ಸುಮಾರು 160 ದೃಷ್ಟಿ ಸವಾಲುಳ್ಳ ಚೆಸ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಎಂಟು ಸುತ್ತುಗಳ ಈ ಪಂದ್ಯಾವಳಿಯಲ್ಲಿ ತಮಿಳುನಾಡಿನ ಹರಿಹರನ್ ಗಾಂಧಿ 7 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಅಲಂಕರಿಸಿದರು.

ಕೇರಳದ ಶ್ರೀ ಮೊಹಮ್ಮದ್ ಶಾಲಿ, ತಮಿಳುನಾಡಿನ ಶ್ರೀ ಸಾಯಿ ಕೃಷ್ಣ, ಕರ್ನಾಟಕದ ಶ್ರೀ ಶಶಿಧರ್, ಕೇರಳದ ಶ್ರೀ ಸುಜಿತ್ ಉನ್ನಿ ಕ್ರಮವಾಗಿ ದ್ವಿತೀಯ, ತೃತೀಯ, ಚತುರ್ಥ ಹಾಗೂ ಪಂಚಮ ಸ್ಥಾನ ಪಡೆದುಕೊಂಡರು. ಸಕ್ಷಮದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಗೋವಿಂದರಾಜನ್ ಹಾಗೂ ಅರ್. ಎಸ್, ಎಸ್ ನ ಕ್ಷೇತ್ರೀಯ ಕಾರ್ಯವಾಹರಾದ ತಿಪ್ಪೇಸ್ವಾಮಿ ಈ ಟ್ರೋಫಿ ಹಾಗು ಬಹುಮಾನಗಳನ್ನು ವಿತರಿಸಿದರು. ತಿಪ್ಪೇಸ್ವಾಮಿಯವರು ಸಮಾರೋಪ ಸಮಾರಂಭದ ಭಾಷಣದಲ್ಲಿ ದಿವ್ಯಾಂಗರಲ್ಲಿ ಕ್ರೀಡಾ ಮನೋಭಾವವನ್ನು ವೃದ್ಧಿಸುವ ಇಂತಹ ಕಾರ್ಯಕ್ರಮಗಳು ಅವರಲ್ಲಿ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ಹಾಗೂ ಸವಾಲನ್ನು ಎದುರಿಸುವ ಧೈರ್ಯವನ್ನು ತುಂಬಲು ಸಹಕಾರಿಯಾಗಲಿದೆ ಹಾಗೂ ಸಕ್ಷಮದ ಈ ಪ್ರಯತ್ನವನ್ನು ಅಭಿನಂದಿಸಿದರು.

ಈ ಟಾಪ್ 5 ವಿಜೇತರಲ್ಲದೆ ಟಾಪ್ 10 ವಿಜೇತರನ್ನು,ಹಾಗೂ ಜೂನಿಯರ್ ಟಾಪ್ 10 ಸೇರಿ ಒಟ್ಟು 25 ಆಟಗಾರರನ್ನು ಈ ಪಂದ್ಯಾವಳಿಯಲ್ಲಿ ನ್ಯಾಷನಲ್ ಚಾಂಪಿಯನ್ ಗೆ ಆಯ್ಕೆ ಮಾಡಲಾಯಿತು. ಸಕ್ಷಮದ ರಾಷ್ಟ್ರೀಯ ದೃಷ್ಟಿ ಪ್ರಕೋಷ್ಠ ಪ್ರಮುಖರಾದ ವಿನೋದ್ ಪ್ರಕಾಶ್, L&T ಯ ಮ್ಯಾನೇಜರ್ ಶಿವಪ್ರಸಾದ್ ಹಾಗೂ ಬ್ರಿಟಾನಿಯಾ ಆಡಳಿತಾಧಿಕಾರಿ ಭಾಸ್ಕರ್ ಬಹುಮಾನ ವಿತರಿಸಿದರು.


ಸಮಾರೋಪ ಸಮಾರಂಭದ ಆರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂವಾದ ಹಾಗೂ ವಿಕ್ರಮ ವಾರಪತ್ರಿಕೆಯ ಸಂಪಾದಕ ವೃಷಾಂಕ್ ಭಟ್ ರವರು ದೇಶದಲ್ಲಿರುವ ಕಾರ್ನಿಯ ಅಂಧರ ಬಾಳಿನಲ್ಲಿ ಬೆಳಕನ್ನು ಮೂಡಿಸಲು ನೇತ್ರದಾನದ ಅವಶ್ಯಕತೆಯನ್ನು ಪ್ರತಿಪಾದಿಸಿ ತಾವು ತಮ್ಮ ನೇತ್ರದಾನವನ್ನು ಮಾಡುವುದಾಗಿ ಸಂಕಲ್ಪ ಪಟ್ಟರು ಹಾಗೂ ಸಕ್ಷಮದ ದಿವ್ಯಾಂಗ ಕ್ಷೇತ್ರದ ನಿಸ್ವಾರ್ಥ ಸೇವೆಯನ್ನು ಅಭಿನಂದಿಸಿ ತಮ್ಮ ಪತ್ರಿಕೋದ್ಯಮದ ಮೂಲಕ ದಿವ್ಯಾಂಗತೆಯ ಬಗ್ಗೆ ಜಾಗೃತಿ ಮೂಡಿಸಲು ಸಕ್ಷಮದೊಂದಿಗೆ ಕೈ ಜೋಡಿಸುವದಾಗಿ ತಿಳಿಸಿದರು .


ಸಕ್ಷಮ ಕರ್ನಾಟಕದ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಸುಧೀರ್ ಪೈ ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಪಂದ್ಯಾವಳಿಯಲ್ಲಿ ಸ್ವಯಂಸೇವಕರಾಗಿ ಸೇವೆಸಲ್ಲಿಸಿದ ಆರ್.ಏನ್.ಎಸ್ ಪದವಿಪೂರ್ವ ಕಾಲೇಜಿನ ಏನ್.ಎಸ್ಎಸ್ ವಿದ್ಯಾರ್ಥಿಗಳ ಸೇವೆಗಾಗಿ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಇಬ್ಬರು ಕ್ರೀಡಾಪಟುಗಳು ತಮ್ಮ ಅಭಿಪ್ರಾಯವನ್ನು ಹಂಚಿ ಕ್ರೀಡಾಪಟುಗಳ ಮೂರು ದಿನಗಳ ಕಾಲದ ಸಕ್ಷಮದ ಊಟ, ವಸತಿ, ಉಪಾಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಸಕ್ಷಮ ಸಂಘಟನೆಯ ಕಾರ್ರ್ಯಕರ್ತರ ಸೇವೆಯನ್ನು ಸ್ಮರಿಸಿದರು. ಸಕ್ಷಮ ರಾಜ್ಯಾಧ್ಯಕ್ಷ ವಸಂತ ಮಾಧವರವರು ಸ್ವಾಗತಿಸಿ, ಪ್ರಾಂತ ಕಾರ್ಯದರ್ಶಿ ಡಾ.ಹರಿಕೃಷ್ಣ ರೈ ವಾದಿಸಿದರು., ಸಕ್ಷಮ ಬೆಂಗಳೂರು ಘಟಕದ ಕಾರ್ಯಕರ್ತೆ ಪ್ರೀತಾ ರವರು ಕಾರ್ಯಕ್ರಮವನ್ನುನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಚೆಸ್ ಆರ್ಬಿಟ್ರೇಟಾರ್ ವಸಂತ್ ರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು

LEAVE A REPLY

Please enter your comment!
Please enter your name here