





ಪುತ್ತೂರು: ಬಿಳಿನೆಲೆ ಹಿ.ಪ್ರಾ.ಶಾಲೆಯಲ್ಲಿ ಬೈಲು ಪೋಷಕರ ಸಭೆ ನಡೆಯಿತು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಟಿ. ನಾರಾಯಣ ಭಟ್ ಮಾತನಾಡಿ ಮಕ್ಕಳಿಗೆ ಪೋಷಕರು ಮನೆಯಲ್ಲಿ ಸೂಕ್ತವಾದ ವಾತಾವರಣ ಸೃಷ್ಟಿಸಬೇಕು. ಜೀವನ ಮೌಲ್ಯಗಳು ಮತ್ತು ಬದುಕಿನ ಕೌಶಲ್ಯಗಳನ್ನು ಹೇಗೆ ಬೆಳೆಸಬೇಕು ಹಾಗೂ ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರದ ಬಗ್ಗೆ ತಿಳಿಸಿದರು.








ಎಸ್‌ಡಿಎಂಸಿ ಅಧ್ಯಕ್ಷ ವಿನೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸ್ಥಳೀಯ ಜನಪ್ರತಿನಿಧಿ ಸತೀಶ್ ಕಳಿಗೆ ಹಾಗೂ ಎಸ್‌ಡಿಎಂಸಿ ಉಪಾಧ್ಯಕ್ಷ ಉಪಸ್ಥಿತರಿದ್ದರು.

ಪೋಷಕರು ಭಾಗವಹಿಸಿದ್ದರು. ಪ್ರಭಾರ ಮುಖ್ಯಗುರು ಸುನಂದ ಬಿ. ಸ್ವಾಗತಿಸಿ, ದೈಹಿಕಶಿಕ್ಷಕ ಚಂದ್ರಶೇಖರ ಅಮೈ ವಂದಿಸಿದರು. ಸಹಶಿಕ್ಷಕಿ ದಮಯಂತಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಪಾರ್ವತಿ, ರಜನಿ ಸಹಕರಿಸಿದರು.







