ಪುತ್ತೂರು: ಜ.22 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜರುಗಲಿರುವ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ ಮತ್ತು ಆದಿಚುಂಚನಗಿರಿ ಪೀಠಾದ್ಯಕ್ಷ ಡಾ| ನಿರ್ಮಲಾನಂದನಾಥ ಶ್ರೀಗಳ ಪಟ್ಟಾಭಿಷೇಕದ ದಶಮಾನೋತ್ಸವದಲ್ಲಿ ರಜತ ತುಲಭಾರ ಹಾಗು ಗ್ರಂಥ ಬಿಡುಗಡೆ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ ಕಾರ್ಯಕ್ರಮ ಜ.15ರಂದು ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ನೆರವೇರಿಸಿದರು.
ಚಪ್ಪರ ಮುಹೂರ್ತಕ್ಕೆ ತಳಿರುತೋರಣದಿಂದ ಶೃಂಗರಿಸಿದ ನಾಲ್ಕು ಕಂಬಗಳನ್ನು ಮುಹೂರ್ತ ರೂಪದಲ್ಲಿ ನೆಲ್ಲಿಸಿ ಅದಕ್ಕೆ ನೀರೆರೆದು ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಶಾಸಕ ಸಂಜೀವ ಮಠಂದೂರು, ಜಯಂತ್ಯೋತ್ಸವ ಜಿಲ್ಲಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ತಾಲೂಕು ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಆರ್ಥಿಕ ಸಮಿತಿಯ ಸಹ ಸಂಚಾಲಕರೂ ಮತ್ತು ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು.ಪಿ.ರಾಮಕೃಷ್ಣ, ವಿಟ್ಲ ಗೌಡ ಸೇವಾ ಸಂಘ ಅಧ್ಯಕ್ಷ ಮೋನಪ್ಪ ಗೌಡ, ಸುಳ್ಯದ ಚಂದ್ರಕೋಲ್ಚಾರ್, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಗೌಡ ಸೇವಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಜಯಂತ್ಯೋತ್ಸವ ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಪುತ್ತೂರು ವಲಯದ ಸುಂದರ ಗೌಡ ನಡುಬೈಲು, ಉಪ್ಪಿನಂಗಡಿ ವಲಯದ ಸುರೇಶ್, ಸವಣೂರು ವಲಯದ ಪ್ರವೀಣ್ ಕುಂಟ್ಯಾನ, ಪ್ರೇಮಾನಂದ, ಲಿಂಗಪ್ಪ ಗೌಡ ತೆಂಕಿಲ, ಅಮರನಾಥ್ ಗೌಡ ಬಪ್ಪಳಿಗೆ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಜಿನ್ನಪ್ಪ ಗೌಡ ಮಳವೇಲು, ರವಿ ಮುಂಗ್ಲಿಮನೆ, ಉಡುಪಿ ಗೌಡ ಸಂಘದ ಅಧ್ಯಕ್ಷ ಸುರೇಶ್, ಒಕ್ಕಲಿಗ ಸ್ವಸಹಾಯ ಒಕ್ಕೂಟದ ವೆಂಕಪ್ಪ ಗೌಡ, ನ್ಯಾಯವಾದಿ ಮಹಾಬಲ ಗೌಡ, ಒಕ್ಕಲಿಗ ಪತ್ತಿನ ಸಹಕಾರಿ ಸಂಘದ ಪ್ರಕಾಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.