ಇಂದು(ಜ.16) ಸಂಘ ಕಾರ್ಯಾಲಯ ಪಂಚವಟಿ ಲೋಕಾರ್ಪಣೆ ; ಸ್ವಯಂ ಸೇವಕರು ಸೂಚಿಸಿದ ಸ್ಥಳದಲ್ಲೇ ವಾಹನ ಪಾರ್ಕಿಂಗ್ ಮಾಡಲು ಆರ್‌ಎಸ್‌ಎಸ್ ವಿನಂತಿ

0

ಪುತ್ತೂರು:ಜ.16ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯಾಲಯವಾದ ’ಪಂಚವಟಿ’ ಲೋಕಾರ್ಪಣೆಯ ಸಭಾ ಕಾರ್ಯಕ್ರಮ ಜರಗುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಆಗಮಿಸುವ ಸ್ವಯಂ ಸೇವಕರು ತಮ್ಮ ವಾಹನಗಳನ್ನು ಸೂಚಿಸಿದ ಸ್ಥಳದಲ್ಲೇ ಪಾರ್ಕ್ ಮಾಡುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿನಂತಿಸಲಾಗಿದೆ.

ಕಡಬ, ಬೆಳ್ತಂಗಡಿ ತಾಲೂಕಿನಿಂದ ಉಪ್ಪಿನಂಗಡಿಯಾಗಿ ಬರುವವರು ಬೊಳ್ವಾರ್, ಮಂಜಲ್ಪಡ್ಪು (ಪೆಟ್ರೋಲ್ ಪಂಪ್)ಮೂಲಕ ಮಾಣಿ ಸುಳ್ಯ ರಸ್ತೆಯಲ್ಲಿ ಎಡಕ್ಕೆ ಬಂದು ಅಶ್ಮಿ ಟವರ‍್ಸ್ ಬಳಿ ಸ್ವಯಂ ಸೇವಕರನ್ನು ಇಳಿಸಬೇಕು.ಸ್ವಯಂಸೇವಕರು ಬಂದಿರುವ ವಾಹನ ಬಂದ ರಸ್ತೆಯಲ್ಲಿ ವಾಪಸ್ ಹೋಗಿ ಬೊಳ್ವಾರ್,ಉಪ್ಪಿನಂಗಡಿ ರಸ್ತೆಯಲ್ಲಿ ಬಂದು ಬಲಕ್ಕೆ ಇರುವ ರೈಲ್ವೆ ನಿಲ್ದಾಣ ರಸ್ತೆ ಮೂಲಕ ದೇವಸ್ಥಾನದ ಬಲಗಡೆ ಇರುವ ಕಂಬಳದ ಗದ್ದೆಯ ಸುತ್ತಮುತ್ತ ಪಾರ್ಕಿಂಗ್ ಮಾಡುವುದು.

ಕಡಬ ತಾಲೂಕಿನಿಂದ ಆಲಂಕಾರು, ಕ್ಯಾಂಪ್ಕೊ ರಸ್ತೆಯಾಗಿ ಬರುವವರು ಮತ್ತು ಸುಳ್ಯ ತಾಲೂಕಿನವರು ಸುಳ್ಯ – ಮಾಣಿ ಬೈಪಾಸ್ ರಸ್ತೆಯಲ್ಲಿ ಬಂದು ಬಲ್ನಾಡಿಗೆ ಹೋಗುವ ಸರ್ಕಲ್‌ನಲ್ಲಿ ಸ್ವಯಂ ಸೇವಕರನ್ನು ಇಳಿಸಬೇಕು.ಅವರು ಬಂದಿರುವ ವಾಹನಗಳು ಅದೇ ರಸ್ತೆಯಲ್ಲಿ ಮುಂದೆ ಹೋಗಿ ಮಂಜಲ್ಪಡ್ಪುನಲ್ಲಿ ಎಡಕ್ಕೆ ಬಂದು ಬೊಳ್ವಾರ್,ಉಪ್ಪಿನಂಗಡಿ ರಸ್ತೆಯಲ್ಲಿ ಬರಬೇಕು ಮತ್ತು ಬಲಕ್ಕೆ ಇರುವ ರೈಲ್ವೆ ನಿಲ್ದಾಣ ರಸ್ತೆಯ ಮೂಲಕ ದೇವಳದ ಕಂಬಳದ ಗದ್ದೆಯ ಅಕ್ಕ ಪಕ್ಕದಲ್ಲಿ ಪಾರ್ಕಿಂಗ್ ಮಾಡುವುದು.

ಬಂಟ್ವಾಳ, ವಿಟ್ಲ ತಾಲೂಕಿನವರು ಮಾಣಿ – ಸುಳ್ಯ ಬೈಪಾಸ್ ರಸ್ತೆಯಲ್ಲಿ ಬಂದು ಅಶ್ಮಿಯ ಪಕ್ಕದಲ್ಲೇ ಇರುವ ಮೈದಾನದಲ್ಲಿ ಪಾರ್ಕ್ ಮಾಡುವುದು.ಪುತ್ತೂರು ನಗರ, ಗ್ರಾಮಾಂತರ ತಾಲೂಕಿನವರು ಸುಳ್ಯ ಮಾಣಿ ಬೈಪಾಸ್ ರಸ್ತೆಯಲ್ಲಿ ಬಂದು ಬಲ್ನಾಡಿಗೆ ಹೋಗುವ ಸರ್ಕಲ್‌ನ ಬಳಿ ಸ್ವಯಂ ಸೇವಕರನ್ನು ಇಳಿಸಬೇಕು.ವಾಹನಗಳನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಕ್ರೀಡಾ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here