ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ಎಂಬಲ್ಲಿನ ಓಂಕಾರ ಬಡಾವಣೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರು ಹಾಕಿದ ಬ್ಯಾನರ್ ಅನ್ನು ನರಿಮೊಗರು ಪಂಚಾಯತ್ ಆಡಳಿತ ಸಮಿತಿ ತೆರವುಗೊಳಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಕಳೆದ ಹತ್ತು ವರ್ಷಗಳಿಂದ ಓಂಕಾರ ಬಡಾವಣೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಾದ ರಸ್ತೆ ಡಾಮಾರೀಕರಣ, ನೀರು, ದಾರಿದೀಪ, ಚರಂಡಿ ವ್ಯವಸ್ಥೆ ಕಲ್ಪಿಸದ ಪಂಚಾಯತ್ ಹಾಗೂ ಸರ್ಕಾರದ ವಿರುದ್ಧ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಚುನಾವಣೆಯನ್ನು ಓಂಕಾರ ಬಡಾವಣೆಯ ಎಲ್ಲಾ ಮತದಾರರು ಬಹಿಷ್ಕರಿಸುವ ಚುನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ನರಿಮೊಗರು ಪಂಚಾಯತ್ ಆಡಳಿತ ಸಮಿತಿಯು ಕೇವಲ ಒಂದೇ ದಿನದೊಳಗೆ ತೆರವುಗೊಳಿಸಿರುವ ಘಟನೆ ನಡೆದಿದೆ.
ನರಿಮೊಗರು ಪಂಚಾಯತ್ ಆಡಳಿತದಿಂದ ದಬ್ಬಾಳಿಕೆ. ಬಹಿಷ್ಕಾರ ಬ್ಯಾನರ್ ಕಿತ್ತು ತೆಗೆದ ಪಂಚಾಯತ್ ಸಿಬ್ಬಂದಿ. ಮೂಲಭೂತ ಸೌಕರ್ಯ ಕೊಡೋ ಯೋಗ್ಯತೆ ಇಲ್ಲದ ಪಂಚಾಯತ್ ಆಡಳಿತ ಎನ್ನುವ ನರಿಮೊಗರು ಪಂಚಾಯತ್ ವಿರುದ್ಧದ ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಕಂಡು ಬಂದಿದೆ.