ಪುತ್ತೂರು:ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನೂತನ ನ್ಯಾಯಾಧೀಶರಾಗಿ ಚಿಕ್ಕಬಳ್ಳಾಪುರದ ಶ್ರೀಮತಿ ಸರಿತಾ ಡಿ ಅವರು ಡಿ.16ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಹಿಂದೆ ಜಿಲ್ಲಾ ನ್ಯಾಯಾಧೀಶರಾಗಿದ್ದ ಓಂಕಾರಪ್ಪ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಓಂಕಾರಪ್ಪ ಅವರು ಮೇ ತಿಂಗಳಲ್ಲಿ ವರ್ಗಾವಣೆಗೊಂಡು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಆಗಮಿಸಿದ್ದರು. ಇದೀಗ ಅವರು ಮತ್ತೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ತೆರವಾದ ಹುದ್ದೆಗೆ ನೂತನ ನ್ಯಾಯಾಧೀಶರಾಗಿ ಶ್ರೀಮತಿ ಸರಿತಾ ಡಿ ಅವರು ನೇಮಕಗೊಂಡು ಆಗಮಿಸಿ ಜ.16ರಂದು ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇತ್ತೀಚೆಗೆ ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ 6 ಮಂದಿ ಉತ್ತೀರ್ಣರಾಗಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದರು. ನೂತನವಾಗಿ ನೇಮಕಗೊಂಡಿರುವ ಆರು ಜಿಲ್ಲಾನ್ಯಾಯಾಧೀಶರಿಗೆ ಸ್ಥಳ ನಿಯುಕ್ತಿಗೊಳಿಸಿ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಬಿ.ಮುರಳೀಧರ ಪೈ ಅವರು ಅಧಿಸೂಚನೆ ಹೊರಡಿಸಿದ್ದರು. ನೂತನವಾಗಿ ಆಯ್ಕೆಯಾಗಿರುವ ಆರು ಮಂದಿ ಜಿಲ್ಲಾ ನ್ಯಾಯಾಧೀಶರಲ್ಲಿ ಒಬ್ಬರಾಗಿರುವ ಸರಿತಾ ಡಿ ಅವರನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ನಿಯುಕ್ತಿಗೊಳಿಸಲಾಗಿದ್ದು ಜ.16ರಂದು ಅವರು ಅಧಿಕಾರ ವಹಿಸಿಕೊಂಡಿದ್ದಾರೆ.