ಅಶೋಕ್ ರೈ ಕಳೆದ 6 ವರ್ಷಗಳಿಂದ ಬಿಜೆಪಿಯ ಸಕ್ರೀಯ ಸದಸ್ಯತ್ವ ನವೀಕರಿಸಿಲ್ಲ !:ನಮ್ಮ ಕಾರ್ಯಕರ್ತರು ನಮ್ಮಲ್ಲಿ ಭದ್ರವಾಗಿದ್ದಾರೆ – ಬಿಜೆಪಿ ಮಂಡಲದ ಹೇಳಿಕೆ

ಪುತ್ತೂರು: ಬಿಜೆಪಿ ಪಕ್ಷವು ಸಿದ್ದಾಂತದ ಮೇಲೆ ನಿಂತಿದೆ. ಅದನ್ನು ನಂಬಿಕೊಂಡು ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಸಿದ್ಧಾಂತವನ್ನು ಒಪ್ಪಿಕೊಂಡು ಯಾವ ಕಾಲಕ್ಕೂ ಚುನಾವಣೆ ಬರಲಿ ಅಲ್ಲಿ ಸೋಲು ಗೆಲುವು ಮುಖ್ಯವಾಗುವುದಿಲ್ಲ. ಯಾಕೆಂದರೆ ಇಲ್ಲಿ ದೇಶದ ಬಗ್ಗೆ ಚಿಂತನೆ ಇದೆ. ಬೇರೆ ಪಕ್ಷದಲ್ಲಿ ಬಿಜೆಪಿಯನ್ನು ಸೋಲಿಸುವ ಚಿಂತನೆ ಇದೆ. ಹಾಗಾಗಿ ಕಳೆದ 6 ವರ್ಷಗಳಿಂದ ಬಿಜೆಪಿಯ ಸಕ್ರೀಯ ಸದಸ್ಯತ್ವವಲ್ಲದ ಅಶೋಕ್ ಕುಮಾರ್ ರೈ ಅವರು ಬೇರೆ ಪಕ್ಷಕ್ಕೆ ಸೇರ್ಪಡೆಗೊಂಡರೂ ನಮ್ಮ ಕಾರ್ಯಕರ್ತರು ನಮ್ಮಲ್ಲಿ ಭದ್ರವಾಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಬಿಜೆಪಿ ಕಾರ್ಯಕರ್ತರು ಯಾರು ಅವರ ಹಿಂದೆ ಹೋಗುತ್ತಿಲ್ಲ. ಒಟ್ಟು ಯಾರು ಇವತ್ತು ಬೇರೆ ಪಕ್ಷವನ್ನು ಸೇರುತ್ತಾರೋ ಅವರು 6 ವರ್ಷದ ಹಿಂದೆ ಬಿಜೆಪಿ ಪಕ್ಷದಲ್ಲಿ ಮಿಸ್ಡ್ ಕಾಲ್‌ನಲ್ಲಿ 25 ಮಂದಿ ಸದಸ್ಯರನ್ನು ಮಾಡುವ ಮೂಲಕ ಬಿಜೆಪಿ ಸಕ್ರೀಯಾ ಸದಸ್ಯರಾಗಿದ್ದರು. ಶಾಸಕ ಸಂಜೀವ ಮಠಂದೂರು ಜಿಲ್ಲಾ ಪ್ರದಾನ ಕಾರ್ಯದರ್ಶಿ ಆಗಿರುವ ಸಂದರ್ಭದಲ್ಲಿ ಅವರನ್ನು ಜಿಲ್ಲಾ ಕಾರ್ಯಕಾರಿಣಿಯಲ್ಲೂ ಸದಸ್ಯರನ್ನಾಗಿ ಮಾಡಲಾಗಿತ್ತು. ಆದರೆ ಅವರು ಕಳೆದ ಆರು ವರ್ಷದಿಂದ ಪಕ್ಷದ ಯಾವುದೇ ಸಭೆಗೂ ಭಾಗವಹಿಸುತ್ತಿರಲ್ಲ ಆದರೆ ನಾಯಕರು ಬರುವಾಗ ಅವರ ಕಾರಿನಲ್ಲಿ ಬರುತ್ತಿದ್ದರು. ಜೊತೆಗೆ ಮತ್ತಿನ ಎರಡು ಅವಧಿಯಲ್ಲಿ ಅವರು ಸಕ್ರೀಯ ಸದಸ್ಯತ್ವವನ್ನು ನವೀಕರಣಗೊಳಿಸಿಲ್ಲ ಎಂದರು.

ನಮ್ಮ ಕಾರ್ಯಕರ್ತರು ನಮ್ಮಲ್ಲಿ ಭದ್ರವಾಗಿದ್ದಾರೆ:
ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಬಿಜೆಪಿಯಲ್ಲಿ ಚುನಾವಣೆ ಒಂದು ಭಾಗ ಮಾತ್ರ. 18 ಕೋಟಿಗೂ ಅಧಿಕ ಸದಸ್ಯತ್ವ ಇರುವ ವಿಶ್ವದಲ್ಲೇ ನಂ. 1 ಪಕ್ಷ ಬಿಜೆಪಿ. ಈ ಪಕ್ಷವು ಸಿದ್ಧಾಂತದ ಮೇಲೆ ನಿಂತಿದೆ. ಅದನ್ನು ನಂಬಿಕೊಂಡು ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಸಿದ್ದಾಂತವನ್ನು ಒಪ್ಪಿಕೊಂಡವರು ಯಾವ ಕಾಲಕ್ಕೂ ಚುನಾವಣೆ ಬರಲಿ, ಸೋಲು, ಗೆಲುವು ಇಲ್ಲಿ ಅವರಿಗೆ ಮುಖ್ಯವಾಗುವುದಿಲ್ಲ. ನಮ್ಮ ಕಾರ್ಯಕರ್ತರು ನಮ್ಮಲ್ಲಿ ಭದ್ರವಾಗಿರುತ್ತಾರೆ. ಬಿಜೆಪಿ ದೇಶದ ಬಗ್ಗೆ ಚಿಂತನೆ ಮಾಡುವವರು. ಉಳಿದ ಪಕ್ಷಗಳು ಬಿಜೆಪಿಯನ್ನು ಸೋಲಿಸುವುದು ಹೇಗೆ ಎಂಬ ಚಿಂತನೆ ಮಾಡುತ್ತಾರೆ. ನಮಗೆ ಇದರಲ್ಲಿ ಚಿಂತನೆ ಇಲ್ಲ. ನಮ್ಮಲ್ಲಿ ಬೇಕಾದಷ್ಟು ದೇವದುರ್ಲಬ ಕಾರ್ಯಕರ್ತರಿದ್ದಾರೆ ಎಂದರು.

ಹಿರಿಯರ ತೀರ್ಮಾಣವೆ ಅಂತಿಮ:
ನಮ್ಮ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡುವುದು ಚುನಾವಣೆ ಘೋಷಣೆಯ ಬಳಿಕ. ಇಲ್ಲಿ ಹಿರಿಯರು ತೀರ್ಮಾಣ ಕೈಗೊಳ್ಳುತ್ತಾರೆ. ಈಗ ನಮಗೆ ಪಕ್ಷ ಕೊಟ್ಟ ಜವಬ್ದಾರಿ ವಿಜಯ ಸಂಕಲ್ಪ ಅಭಿಯಾನ ಇದನ್ನು ಮಾಡಬೇಕು. ಇದರ ಜೊತೆಗೆ ಬೇಕಾದಷ್ಟು ನಮ್ಮ ಸರಕಾರದ ಸಾಧನೆ ಇದೆ. ಇದರಲ್ಲಿ ಶಾಸಕರು ಸೇರಿ ಕೊಂಡು ಅಭಿಯಾನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಮತ್ತು ಪಿ.ಜಿ.ಜಗನ್ನಿವಾಸ ರಾವ್ ಅವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.