ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ನೆಲ್ಯಾಡಿ ಪೇಟೆಗೆ ಮುಕುಟ ಮಣಿಯಂತೆ ನಿರ್ಮಾಣಗೊಂಡಿರುವ ಡಿಯೋನ್ ಗ್ರೂಪ್‌ನ’ ಡಿಯೋನ್ ಸ್ಕ್ವೇರ್’ ವಾಣಿಜ್ಯ ಸಂಕೀರ್ಣ ಜ.21ರಂದು ಬೆಳಿಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿಗೆ ಹೊಸ ಹೊಸ ಉದ್ದಿಮೆಗಳೂ ಬರುತ್ತಿವೆ. ಈ ಭಾಗದ ಜನರಿಗೆ ಬೇಕಾದ ಅವಶ್ಯಕ ವಸ್ತುಗಳು ನೆಲ್ಯಾಡಿಯಲ್ಲಿಯೇ ದೊರೆಯುತ್ತಿದೆ. ಬೆಳೆಯುತ್ತಿರುವ ನೆಲ್ಯಾಡಿ ಪೇಟೆಯಲ್ಲಿ ಹೊಸ ಹೊಸ ವಾಣಿಜ್ಯ ಸಂಕೀರ್ಣಗಳೂ ನಿರ್ಮಾಣಗೊಳ್ಳುತ್ತಿದ್ದು ಉದ್ಯಮಿಗಳನ್ನು ಆಕರ್ಷಿಸುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ನೆಲ್ಯಾಡಿ ಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಸಮೀಪದಲ್ಲಿಯೇ ಸುಸಜ್ಜಿತವಾಗಿರುವ ಎಲ್ಲಾ ಸೌಕರ್ಯ, ಸೌಲಭ್ಯಗಳೊಂದಿಗೆ ’ಡಿಯೋನ್ ಸ್ಕ್ವೇರ್’ ನಿರ್ಮಾಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನಿರ್ಮಾಣಗೊಂಡಿರುವ ಈ ವಾಣಿಜ್ಯ ಸಂಕೀರ್ಣ ಜನರ ಆಕರ್ಷಣೆಯ ಕೇಂದ್ರ ಬಿಂದುವೂ ಆಗಿದೆ. ಸುಮಾರು 27 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಈ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿದ್ದು ನೆಲಮಹಡಿ ಹಾಗೂ ಎರಡು ಅಂತಸ್ತು ಹೊಂದಿದೆ. ಈ ವಾಣಿಜ್ಯ ಸಂಕೀರ್ಣದಲ್ಲಿ 300 ರಿಂದ 3 ಸಾವಿರ ಚದರ ಅಡಿಯ ಸುಮಾರು 65 ಅಂಗಡಿ ಕೋಣೆಗಳಿದ್ದು ಮುಂದಿನ ದಿನದಲ್ಲಿ ಎಲ್ಲಾ ವಸ್ತುಗಳು ಇಲ್ಲಿ ಒಂದೇ ಸೂರಿನಲ್ಲಿ ಜನರಿಗೆ ದೊರೆಯಲಿದೆ. ಸೂಪರ್ ಬಜಾರ್, ಬೇಕರಿ, ಕಿಡ್ಸ್‌ವೇರ್, ಗೃಹೋಪಯೋಗಿ ಪೀಠೋಪಕರಣಗಳ ಮಳಿಗೆ ಈ ವಾಣಿಜ್ಯ ಸಂಕೀರ್ಣದಲ್ಲಿ ಶೀಘ್ರದಲ್ಲಿ ಶುಭಾರಂಭಗೊಳ್ಳಲಿದೆ. ಶುದ್ಧವಾದ ನೀರಿನ ವ್ಯವಸ್ಥೆ, ಲಿಫ್ಟ್ ಸೌಲಭ್ಯ, ಶೌಚಾಲಯ, 50 ವಾಹನಗಳು ಏಕಕಾಲದಲ್ಲಿ ನಿಲ್ಲಿಸಬಹುದಾದ ಪಾರ್ಕಿಂಗ್ ವ್ಯವಸ್ಥೆ, ಜನರೇಟರ್, ದಿನದ 24 ಗಂಟೆಯೂ ಸೆಕ್ಯುರಿಟಿ ವ್ಯವಸ್ಥೆ ಈ ವಾಣಿಜ್ಯ ಸಂಕೀರ್ಣ ಹೊಂದಿದೆ. ಒಟ್ಟಿನಲ್ಲಿ ನೆಲ್ಯಾಡಿಯ ಪೇಟೆಯಲ್ಲಿ ಉದ್ಯಮ ಆರಂಭಿಸಬೇಕೆಂಬ ಕನಸು ಹೊಂದಿರುವವರಿಗೆ ’ಡಿಯೋನ್ ಸ್ಕ್ವೇರ್ ’ ವಾಣಿಜ್ಯ ಸಂಕೀರ್ಣ ಅತ್ಯುತ್ತಮ ತಾಣವಾಗಿದೆ. ಆಸಕ್ತರು ಮೊ: 9660142352 ನಂಬರ್‌ಗೆ ಸಂಪರ್ಕಿಸಬಹುದಾಗಿದೆ.
ಸೌಲಭ್ಯಗಳು:-
* ಸುಸಜ್ಜಿತ ಕಟ್ಟಡ
* ಲಿಫ್ಟ್ ಸೌಲಭ್ಯ
* ಶೌಚಾಲಯ ವ್ಯವಸ್ಥೆ
* ವಿಶಾಲವಾದ ಪಾರ್ಕಿಂಗ್
* ಜನರೇಟ್ ವ್ಯವಸ್ಥೆ
* 24* 7 ಸೆಕ್ಯುರಿಟಿ ವ್ಯವಸ್ಥೆ