ಜ.26 ಕ್ಕೆ ಉಪ್ಪಿನಂಗಡಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ವಿದ್ಯಾರ್ಥಿ ಯುವಜನ ಸಂಘಟನೆಯಿಂದ ಮಾನವ ಸರಪಳಿ ಕಾರ್ಯಕ್ರಮ

0

ಪುತ್ತೂರು: ಜ. 26 ರಂದು ಪ್ರಜಾಪ್ರಭುತ್ವ ದಿನದ ಪ್ರಯುಕ್ತ ‘ರಾಷ್ಟ್ರ ರಕ್ಷಣೆಗೆ ಸೌರ್ಹಾದತೆಯ ಸಂಕಲ್ಪ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರತೀ ವರ್ಷ ಹಮ್ಮಿಕ್ಕೊಳ್ಳುವ ಮಾನವ ಸರಪಳಿ ಕಾರ್ಯಕ್ರಮವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕೇಂದ್ರಗಳಲ್ಲಿ ನಡೆಯಲಿದ್ದು, ಎಸ್.ಕೆ.ಎಸ್.ಎಸ್.ಎಫ್. ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಮಧ್ಯಾಹ್ನ ಉಪ್ಪಿನಂಗಡಿಯಲ್ಲಿ ನಡೆಯಲಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ದ.ಕ ಈಸ್ಟ್ ಜಿಲ್ಲೆಯ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ದಕ್ಷಿಣ ಕನ್ನಡದಲ್ಲಿ ಈಸ್ಟ್ ಗೆ ಸಂಬಂಧಿಸಿ ಉಪ್ಪಿನಂಗಡಿಯಲ್ಲಿ ಕೂಟೇಲ್ ದರ್ಗಾದಿಂದ ಹೆಚ್ ಎಮ್ ಹಾಲ್ ತನಕ, ವೆಸ್ಟ್ ಗೆ ಸಂಬಂಧಿಸಿ ಮಂಗಳೂರು ಪಡೀಲ್ ನಿಂದ ಅಡ್ಯಾರ್ ಗಾರ್ಡನ್ ತನಕ ಸೌಹಾರ್ದತೆಯ ಸಂದೇಶ ಸಾರುವ ಜಾಥಾ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ದಫ್, ಸ್ಕೌಟ್, ತಂಡಗಳು ಭಾಗವಹಿಸಲಿದೆ. ಎಸ್.ಕೆ.ಎಸ್.ಎಸ್.ಎಫ್. ಇದರ  ಉಪ ವಿಭಾಗಗಳಾದ ವಿಖಾಯ, ತ್ವಲಬಾ, ಕ್ಯಾಂಪಸ್ ತಂಡಗಳು ಸಮವಸ್ತ್ರದೊಂದಿಗೆ ಪಾಲ್ಗೊಳ್ಳಲಿದೆ. ಮೆರವಣಿಗೆಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಘೋಷ ವಾಕ್ಯಗಳು ಮೊಳಗಲಿದೆ. ತದನಂತರ 4 ಗಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮವು ನಡೆಯಲಿದೆ. ನೆರೆದ ಜನರೆಲ್ಲರೂ ಪರಸ್ಪರ ಕೈಜೋಡಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಜ್ಞೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಹು ಬಂದ್ರಾಣ ಉಸ್ತಾದರು ಉದ್ಘಾಟಿಸಲಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಹು ಉಸ್ಮಾನುಲ್ ಫೈಝಿ ಉಸ್ತಾದರು ಅನುಗ್ರಹ ಭಾಷಣ ಮಾಡಲಿದ್ದಾರೆ. ಎಸ್‌ಕೆಎಸ್‌ಎಸ್‌ಎಫ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಆನೀಸ್ ಕೌಸರಿ ವಿಷಯ ಮಂಡಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸಮಸ್ತ ಮತ್ತು ಪೋಷಕ ಸಂಘಟನೆಗಳ ವಿವಿಧ ಉಪ ಸಮಿತಿಗಳ ನೇತಾರರು, ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿರುವರು. ಸೌಹಾರ್ದ ರಾಷ್ಟ್ರ ನಿರ್ಮಾಣಕ್ಕಾಗಿ ಜಾತಿ ಮತ ಬೇಧವಿಲ್ಲದೆ ಸರ್ವರೂ ಈ ಸಂಗಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾನವ ಸರಪಳಿ ಸ್ವಾಗತ ಸಮಿತಿ ಚೇರ್ಮ್ಯಾನ್ ಅಶ್ರಫ್ ಬಾಖವಿ ಚಾಪಳ್ಳ, ಕೋಶಾಧಿಕಾರಿ ಬಾತಿಷಾ ಪಾಟ್ರಕೋಡಿ, ಕಾರ್ಯದರ್ಶಿ ಪಿ.ಎ ಝಕರಿಯಾ ಅಸ್ಲಮಿ ಮರ್ದಾಳ, ಅಶ್ರಫ್ ಮುಕ್ವೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here