Saturday, February 4, 2023
Homeಚಿತ್ರ ವರದಿಬಂಟ ಸಮಾಜದಿಂದ ರಣದೀಪ್ ಸಿಂಗ್ ಸುರ್ಜಿವಾಲರಿಗೆ ಅಭಿನಂದನೆ

ಬಂಟ ಸಮಾಜದಿಂದ ರಣದೀಪ್ ಸಿಂಗ್ ಸುರ್ಜಿವಾಲರಿಗೆ ಅಭಿನಂದನೆ

ಪುತ್ತೂರು : ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಂಟ ಸಮಾಜದ ಅಭಿವೃದ್ಧಿಗೆ ವಾರ್ಷಿಕ ₹250/- ಕೋಟಿ ಅನುದಾನ ನೀಡುವ ಭರವಸೆ ನೀಡಿದ ಕಾಂಗ್ರೆಸ್ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯದ ಉಸ್ತುವಾರಿ ಸನ್ಮಾನ್ಯ ರಣದೀಪ್ ಸಿಂಗ್ ಸುರ್ಜಿವಾಲರನ್ನು ಬಂಟ ಸಮಾಜದ ವತಿಯಿಂದ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರು ಕಾವು ಹೇಮನಾಥ್ ಶೆಟ್ಟಿಯವರ ನೇತೃತ್ವದಲ್ಲಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಮಂಜುನಾಥಭಂಡಾರಿ, ಮಂಗಳೂರು ಮಹಾನಗರ ಪಾಲಿಕಾ ಸದಸ್ಯರು ಶಶಿಧರ ಹೆಗ್ಡೆ, ಜಿಲ್ಲಾ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರು ಜಗನ್ನಾಥ ಚೌಟ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರು ಚಂದ್ರಹಾಸ ಶೆಟ್ಟಿ, ಸುಭಾಶ್ ಶೆಟ್ಟಿ, ಪುತ್ತೂರು ಯುವ ಬಂಟರ ಸಂಘದ ಮಾಜಿ ಕಾರ್ಯದರ್ಶಿ ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಸಂತೋಷ್ ಶೆಟ್ಟಿ ಉಳ್ಳಾಲ, ಮಲ್ಲಿಕಾ ಪಕ್ಕಳ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!