ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂಡಳಿ : ಗೌರವಾಧ್ಯಕ್ಷ; ಬೆಳಿಯಪ್ಪ ಗೌಡ, ಅಧ್ಯಕ್ಷ; ಕೆ.ಎಸ್.ಬಾಲಕೃಷ್ಣ ಕೊಯಿಲ, ಕಾರ್ಯದರ್ಶಿ: ರಾಧಾಕೃಷ್ಣ ನಾಯ್ಕ್

0

ರಾಮಕುಂಜ: ಕಡಬ ತಾಲೂಕಿನ ಕೊಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂಡಳಿಯ ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಕಡಬ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಬೆಳಿಯಪ್ಪ ಗೌಡ ತಿಮರಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಆಲಂಕಾರು ಸಿ.ಎ ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ನಾಯ್ಕ, ಉಪಾಧ್ಯಕ್ಷರಾಗಿ ಸುಪ್ರಿತ್ ರೈ ಬುಡಲೂರು, ಪ್ರವೀಣ್ ರಾಜ್ ಕೆ.ಎಸ್, ಜತೆ ಕಾರ್ಯದರ್ಶಿಗಳಾಗಿ ಪ್ರಶಾಂತ್ ಸಬಳೂರು, ಪ್ರಶಾಂತ್ ಕೊಲ್ಯ, ಕೋಶಾಧಿಕಾರಿಯಾಗಿ ಭರತ್ ಓಕೆ, ಗೌರವ ಸಲಹೆಗಾರರಾಗಿ ರಾಜೀವ ಗೌಡ ಪಟ್ಟೆದಮೂಲೆ, ಗಣೇಶ್ ಎರ್ಮಡ್ಕ, ರಾಮಯ್ಯ ಗೌಡ ಬುಡಲೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗುರುಪ್ರಸಾದ್ ಪಟ್ಟೆದಮೂಲೆ, ಯತೀಶ್ ಸಬಳೂರು, ದಿನೇಶ್ ಪಟ್ಲ, ಪುನೀತ್ ಸೀಗೆತ್ತಡಿ, ಮಹೇಶ್ ಖಂಡಿಗ, ನಿತೇಶ್ ಓಕೆ ಆಯ್ಕೆಯಾಗದ್ದಾರೆ. ಇತ್ತೀಚೆಗೆ ಭಜನಾಮಂದಿರದಲ್ಲಿ ರಾಜೀವ ಗೌಡ ಪಟ್ಟೆದಮೂಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಇದಕ್ಕೂ ಮುನ್ನ ಭಜನಾ ಮಂದಿರದ ೧೪ನೇ ವರ್ಷದ ವಾರ್ಷಿಕೋತ್ಸವದ ಲೆಕ್ಕಪತ್ರ ಮಂಡಿಸಲಾಯಿತು. ನಿಕಟಪೂರ್ವ ಗೌರವಾಧ್ಯಕ್ಷ ಪರಮೇಶ್ವರ ಸಬಲೂರು ಲೆಕ್ಕ ಪತ್ರ ಮಂಡಿಸಿದರು. ನಿಕಟಪೂರ್ವಾಧ್ಯಕ್ಷ ಪುರಂದರ ತುಂಬೆತಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ರಾಮಚಂದ್ರ ನಾಯ್ಕ, ನಿಕಟಪೂರ್ವ ಕಾರ್ಯದರ್ಶಿ ಯತಿನ್ ಪಟ್ಟೆದಮೂಲೆ, ಸದಸ್ಯರಾದ ಮಹೇಶ ಕೆ, ಕುಶಾಂತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here