ರಾಧಾ’ಸ್‌ನ 28ನೇ ವರ್ಷದ ಸಂಭ್ರಮ: ರೆಡಿಮೇಡ್ ಉಡುಪುಗಳ ಖರೀದಿಗೆ 20% ಡಿಸ್ಕೌಂಟ್: ಗ್ರಾಹಕರಿಂದ ಉತ್ತಮ ಸ್ಪಂದನೆ-ಡಿಸ್ಕೌಂಟ್ ಸೇಲ್ ಕೆಲವು ದಿನ ಮುಂದುವರಿಕೆ

0

ಪುತ್ತೂರು:ಜವುಳಿ ಉದ್ಯಮದಲ್ಲೇ ಹೊಸತನವನ್ನು ಪರಿಚಯಿಸಿರುವ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್‌ನ ೨೮ನೇ ವಾರ್ಷಿಕ ಸಂಭ್ರಮಾಚರಣೆಯನ್ನು ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಸಂಭ್ರಮಿಸುತ್ತಿದೆ. ವಾರ್ಷಿಕ ಸಂಭ್ರಮಾಚರಣೆಯ ಅಂಗವಾಗಿ ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳ ಮೇಲೆ ಶೇ.೨೦ ಡಿಸ್ಕೌಂಟ್ ವಿಶೇಷ ಕೊಡುಗೆಯನ್ನು ನೀಡುತ್ತಿದ್ದು ಇದಕ್ಕೆ ಗ್ರಾಹಕರಿಂದ ವ್ಯಾಪಕ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಫೆಬ್ರವರಿ ಪ್ರಥಮ ವಾರದ ತನಕ ಮುಂದುವರಿಯಲಿದೆ.


ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ರಾಧಾಸ್ ಮಳಿಗೆಯು ಕಲ್ಪಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಮಳಿಗೆಯು ಈ ಬಾರಿ ೨೮ನೇ ವರ್ಷದ ಸಂಭ್ರಮಾಚರಣೆಯಲ್ಲಿ ಗ್ರಾಹಕರಿಗೆ ತಮ್ಮ ಆಯ್ಕೆಯ ಉಡುಪುಗಳನ್ನು ಕೊಂಡುಕೊಳ್ಳಲು ವಿಪುಲ ಅವಕಾಶಗಳನ್ನು ಒದಗಿಸಿದೆ.

೧೯೯೫ರಲ್ಲಿ ಕೋರ್ಟುರಸ್ತೆಯಲ್ಲಿ ಸಣ್ಣ ಅಂಗಡಿಯೊಂದರಲ್ಲಿ ಪ್ರಾರಂಭವಾದ ಜವುಳಿ ಉದ್ಯಮವು ಪುತ್ತೂರು ಜನತೆಯ ಅಗತ್ಯತೆಗಳಿಗೆ ತಕ್ಕಂತೆ ಉತ್ತಮ ಸೇವೆ ನೀಡುತ್ತಾ ಯಶಸ್ವಿಯಾಗುತ್ತಾ ಸಾಗಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ೨೦೦೫ರಲ್ಲಿ ಮಳಿಗೆಯನ್ನು ವಿಸ್ತರಿಸಿ, ಅದೇ ಕಟ್ಟಡದ ಮೇಲಂತಸ್ಥಿನಲ್ಲಿ ಮಳಿಗೆಯೊಂದನ್ನು ಪ್ರಾರಂಭಿಸಿದೆ. ತನ್ನ ವಿಶೇಷ ಸೇವೆಯ ಮೂಲಕ ಪುತ್ತೂರು ಮಾತ್ರವಲ್ಲದೇ ನೆರೆಹೊರೆಯ ತಾಲೂಕುಗಳಲ್ಲಿಯೂ ಮನೆ ಮಾತಾಗಿರುವ ರಾಧಾ’ಸ್ ತನ್ನ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ನಿಟ್ಟಿನಲ್ಲಿ ೨೦೧೩ರಲ್ಲಿ ವಿಸ್ತತ ಮಳಿಗೆಯನ್ನು ಪ್ರಾರಂಭಿಸಿದೆ. ಮೂರು ಅಂತಸ್ತಿನ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು ಜಿಲ್ಲೆಯಾದ್ಯಂತ ತನ್ನ ಛಾಪು ಮೂಡಿಸಿದೆ.

ಮದುವೆಯ ಎಕ್ಸ್‌ಕ್ಲೂಸಿವ್ ಕಲೆಕ್ಷನ್: ಮದುವೆ ಸೀರೆಗಳ ಉತ್ತಮ ಆಯ್ಕೆಗೆ ರಾಧಾ’ಸ್ ಪ್ರಥಮ ಆಯ್ಕೆಯಾಗಿದೆ. ಮದುವೆಯ ಶೃಂಗಾರಕ್ಕೆ ಮನಮೋಹಕ ಸೀರೆಗಳ ಅಪೂರ್ವ ಸಂಗ್ರಹವು ಮಳಿಗೆಯಲ್ಲಿದೆ. ಪ್ರತಿ ದಿನ ಮದುವೆ ಜವುಳಿಯ ಹೊಸ ಸಂಗ್ರಹವಿರುವ ಪುತ್ತೂರಿನ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಫ್ಯಾಕ್ಟರಿಯಿಂದ ನೇರ ಗ್ರಾಹಕರಿಗೆ: ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉಡುಪುಗಳನ್ನು ಮಳಿಗೆಯಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ ಹೊಸ ಹೊಸ ಸಂಗ್ರಹಗಳು ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ವಿನೂತನ ಶೈಲಿಯ, ಹೊಸ ಹೊಸ ವಿನ್ಯಾಸದ ಉಡುಪುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರ ಕಣ್ಮನ ಸೆಳೆಯುತ್ತಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು ಸೇರಿದಂತೆ ಎಲ್ಲಾ ಬಗೆಯ ಉಡುಪುಗಳ ಬೃಹತ್ ಸಂಗ್ರಹವಿದೆ.

ಉತ್ತಮ ಗುಣಮಟ್ಟ, ಕಡಿಮೆ ದರ: ನೇರವಾಗಿ ಪ್ಯಾಕ್ಟರಿಯಿಂದ ಖರೀದಿಸಿದ ಉಡುಪುಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು ಸೇರಿದಂತೆ ಎಲ್ಲಾ ಬಗೆಯ ಉಡುಪಗಳ ಬೃಹತ್ ಸಂಗ್ರಹವಿದೆ. ಹಿರಿಯ ಅನುಭವೀ ಸಿಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಅನುಗುಣವಾಗಿ ಮಳಿಗೆಯಲ್ಲಿ ಸಿಬ್ಬಂದಿಗಳು ನೀಡುತ್ತಿರುವ ಸೇವೆಯಿಂದಾಗಿ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೊಡುಗೆಗಳು ಜ.೨೩ರಿಂದ ಪ್ರಾರಂಭಗೊಂಡು ಫೆಬ್ರವರಿ ಮೊದಲ ವಾರದ ತನಕ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here