ಪುತ್ತೂರು: ಬೆಳ್ಳಿ ರಥಾರೂಢನಾದ, ಆರೋಗ್ಯದಾತನಾದ, ನವಗ್ರಹಗಳಿಗೆ ಅಧಿಪತಿಯಾದ ಸೂರ್ಯ ಭಗವಂತನ ರಥಸಪ್ತಮಿಯು ಬಹಳ ವಿಶೇಷವಾದ ದಿನವಾಗಿದೆ. ಈ ಪ್ರಯುಕ್ತ ಇದೇ ಜನವರಿ 28ರಂದು ನೆಹರುನಗರದ ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.
ಬಳಿಕ ವಿಶೇಷ ಅತಿಥಿಯಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾರೀರಿಕ್ ಪ್ರಮುಖ್ ಶ್ರೀ ಗಣೇಶ್, ಕಡೇಶಿವಾಲ್ಯ ಅವರು ರಥಸಪ್ತಮಿಯ ವಿಶೇಷತೆಗಳು ಹಾಗೂ ಸೂರ್ಯನಮಸ್ಕಾರದಿಂದ ಆಗುವ ಪ್ರಯೋಜನಗಳನ್ನು ಮಕ್ಕಳಿಗೆ ಮನದಟ್ಟು ಮಾಡಿದರು.
ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸಿಂಧೂ ವಿ. ಜಿ ಮಾರ್ಗದರ್ಶನ ನೀಡಿದರು. ದೈಹಿಕ ಶಿಕ್ಷಕ ಶ್ರೀ ನವೀನ್ ಕುಮಾರ್ ಮಕ್ಕಳಿಗೆ ಸೂರ್ಯನಮಸ್ಕಾರದ ಪ್ರಾತ್ಯಕ್ಷಿಕೆ ನೀಡಿ ನಿರ್ದೇಶಿಸಿದರು. ಇದರಲ್ಲಿ, ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳೆಲ್ಲರೂ ಪಾಲ್ಗೊಂಡು ರಥಸಪ್ತಮಿಯ ಧನ್ಯತೆಯನ್ನು ಪಡೆದರು.