ಉಪ್ಪಿನಂಗಡಿ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವುಗಳ ಸಹಯೋಗದೊಂದಿಗೆ ಕಲಬುರ್ಗಿ ಶ್ರೀ ಗುರು ವಿದ್ಯಾಪೀಠ ವಸತಿ ಶಾಲೆಯಲ್ಲಿ ಜ.16 ಮತ್ತು 17ರಂದು ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿಗಳಾದ ದೃಶ್ ಹಾಗೂ ಉಪ್ಪಿನಂಗಡಿ ಅಹಸನ್ ವದೂದ್‌ರವರwidening of road margin-A threat to tree eco system. Is healthy community a myth ಎನ್ನುವ ವಿಜ್ಞಾನ ಯೋಜನೆ ರಾಷ್ಟ್ರ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿರುತ್ತದೆ. ಈ ಯೋಜನೆಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ನಿಶಿತಾ ಕೆ.ಕೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.