ಕಡಬ: ಗಂಧ ಕಳ್ಳ ಸಾಗಾಣೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಸೋಮವಾರಪೇಟೆಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಉಮಾರಬ್ಬ ಬಂಧಿತ ಆರೋಪಿಯಾಗಿದ್ದು ಈ ಕಳೆದ 40 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಈತನ ವಿರುದ್ದ ಕಡಬ ಪೊಲೀಸ್ ಠಾಣಾ ಅ,ಕ್ರ 53/1984 ಕಲಂ. 62, 71(a), 80,86,87 KF Act ಜೊತೆಗೆ 379, 411 ಐಪಿಸಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಎಲ್ ಪಿ ಸಿ ವಾರೆಂಟ್ ಹಿನ್ನೆಲೆ ಪೊಲೀಸರು ಹುಡುಕಾಟ ನಡೆಸಿ ಬಂಧಿಸಿದ್ದು ಆರೋಪಿಗೆ ನ್ಯಾಯಾಲವು 15 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
ಈತನ ವಿರುದ್ದ ತುಮಕೂರು ಮತ್ತು ಮೈಸೂರು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲೂ ಕೇಸು ದಾಖಲಾಗಿರುವುದಾಗಿ ತಿಳಿದು ಬಂದಿದೆ. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ ಎಸ್ ಮತ್ತು ಕಡಬ ಠಾಣಾ ಉಪನಿರೀಕ್ಷಕ ಆಂಜನೇಯ ರೆಡ್ಡಿ ರವರ ಹಾಗೂ ಎ ಎಸ್ ಐ ಶಿವರಾಮ ರವರ ಮಾರ್ಗದರ್ಶನದಲ್ಲಿ ಕಡಬ ಠಾಣಾ ಹೆಚ್ ಸಿ ರಾಜು ನಾಯಕ್, ಪಿಸಿ ಸಿರಾಜುದ್ದೀನ್ ಹಾಗೂ ಸಿದ್ದಪ್ಪ ಹೂಗಾರ್ರವರು ಸೋಮವಾರಪೇಟೆ ತಾಲೂಕು ಕೊಡ್ಲಿಪೇಟೆ ಎಂಬಲ್ಲಿ ಈತನನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದಾರೆ.