ಪಡುಮಲೆ: ಸಾಂಪ್ರದಾಯಿಕ ತಟ್ಟಿ ಚಪ್ಪರಕ್ಕೆ ಕರಸೇವೆ

0

ಬಡಗನ್ನೂರು : ಯಾವುದೇ ಸಮಾರಂಭಗಳಿರಲಿ ಅಲ್ಲಿ ಕಾಣುವುದು ಶಾಮಿಯಾನದ ಚಪ್ಪರ ಅಥವಾ ಪ್ಲಾಸ್ಟಿಕ್‌ ನ ಗ್ರೀನ್‌ ಶೇಡ್‌ ಚಪ್ಪರ.ತೆಂಗಿನ ಗರಿಯ ತಟ್ಟಿ ಚಪ್ಪರಗಳು ಭೂತಕಾಲಕ್ಕೆ ಇನ್ನೇನು ಸರಿಯಿತೆನ್ನುವಷ್ಟರಲ್ಲಿ ಇಲ್ಲೊಂದಿಷ್ಟು ಜನ ಸಾಂಪ್ರದಾಯಿಕ  ತೆಂಗಿನ ಗರಿಯ ತಟ್ಟಿ ಚಪ್ಪರಕ್ಕೆ  ಆದ್ಯತೆ ನೀಡಿ ಊರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ತಟ್ಟಿ ಚಪ್ಪರ ಹಾಕುವ ಬಗ್ಗೆ ತೀರ್ಮಾನ ಕೈಗೊಂಡು ಕರಸೇವೆಯ ಮೂಲಕ ತಟ್ಟಿ ಹೆಣೆಯಲು ಆರಂಭಿಸಿದ್ದಾರೆ.

ಇಂತಹದೊಂದು ಜನಪದ ಸಾಂಪ್ರಾದಾಯಿಕ ತಟ್ಟಿ ಚಪ್ಪರಕ್ಕೆ ಮುಂದಾಗಿದ್ದು ಪಡುಮಲೆಯ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಭಕ್ತರು.  ಸುತ್ತ ಮುತ್ತಲಿನ ಮನೆ ತೋಟಗಳಿಂದ ತೆಂಗಿನ ಗರಿ ತಂದು ಹೆಣೆಯುವ ಕೆಲಸ ಭರದಿಂದ ಸಾಗುತ್ತಿದೆ. ದೇವಾಲಯದ ಒಳಾಂಗಣ ಮತ್ತು ಹೊರಾಂಗಣಕ್ಕೆ ತಟ್ಟಿ ಚಪ್ಪರ ಹಾಕಲು ಮುಂದಾದ ಭಕ್ತರು ಸ್ವಯಂ ಪ್ರೇರಣೆಯಿಂದ ದೇವಾಲಯದ ಆವರಣದಲ್ಲಿ ತಟ್ಟಿ ಹೆಣೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಸುಮಾರು 10,000 ತೆಂಗಿನ ಗರಿ ತಟ್ಟಿಯ ಅಗತ್ಯವಿದ್ದು ಊರ ಜನರ ಸಹಕಾರದಿಂದ ಇದು ಸಾಧ್ಯವಾಗಲಿದೆ ಎನ್ನುತ್ತಾರೆ ಇಲ್ಲಿನ ಕರಸೇವಕರು.

LEAVE A REPLY

Please enter your comment!
Please enter your name here