ಪುತ್ತೂರು : ಶ್ರೀದುರ್ಗಾಪರಮೇಶ್ವರಿ(ಉಳ್ಳಾಳ್ತಿ) ಮಲರಾಯ ಕ್ಷೇತ್ರದಲ್ಲಿ ನಡೆದ ನೇಮೋತ್ಸವ ಸಂದರ್ಭದಲ್ಲಿ ದೈವಗಳ ನುಡಿ ವಿಚಾರವಾಗಿ ಜ.29ರಂದು ಸಂಜೆ ಕ್ಷೇತ್ರದ ವಠಾರದಲ್ಲಿ ಸಭೆ ನಡೆಯಿತು.
ಕ್ಷೇತ್ರದ ವಿಶ್ವಸ್ಥ ಮಂಡಳಿ ಕೋಶಾಧಿಕಾರಿ ಪ್ರಸನ್ನ ಬಳ್ಳಾಳ್ ಸ್ವಾಗತಿಸಿದರು. ಕ್ಷೇತ್ರದ ಅಧ್ಯಕ್ಷ ಪ್ರವೀಣ್ ನಾಯಕ್ ಪ್ರಸ್ತಾವಿಕವಾಗಿ ಮಾತಾಡಿದರು. ಕ್ಷೇತ್ರದಲ್ಲಿ ಇನ್ನು ಮುಂದಕ್ಕೆ ಪ್ರತಿವರ್ಷ ನೇಮೋತ್ಸವ ನಡೆಸುವ ಕುರಿತು, ತಂಬಿಲ ವಿಚಾರ, ಕೋಳಿ ರಕ್ತ ಬಿಂದು ಕೊಡುವ ಕುರಿತು ಊರವನ್ನು ಸೇರಿಸಿಕೊಂಡು ವಿಚಾರ ವಿನಿಮಯ ಮಾಡುವುದಾಗಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್, ಟ್ರಸ್ಟಿಗಳಾದ ವಿ.ಕೆ. ಶೆಟ್ಟಿ, ಧನಂಜಯ ರೈ ನಾಯಿಲ, ಮನೋಹರ್ ರೈ ಎಂ, ದಿನೇಶ್ ಕರ್ಮಲ, ಸುಂದರ ನಾಯ್ಕ, ಶಶಿಧರ್ ರಾವ್ ವಿಟ್ಲ, ಜಲಜಾಕ್ಷಿ ಎನ್. ಹೆಗ್ಡೆ, ಪುಷ್ಪಲತಾ ಬೇಬಿ ಪೂಜಾರಿ ಸ್ಥಳಿಯರಾದ ಬೇಬಿ ಪೂಜಾರಿ, ಗೋವಿಂದ ನಾಯಕ್ ಪಾಲೆಚ್ಚಾರು, ಟಿ. ನಾರಾಯಣ್ ಭಟ್, ಬಿ. ಪ್ರಕಾಶ್ ಹೆಗ್ಡೆ, ಬಿ. ವಸಂತ ಹೆಗ್ಡೆ, ದಯಕರ ಹೆಗ್ಡೆ, ಲೋಕೇಶ್ ಪೂಜಾರಿ, ರಾಜೇಶ್, ದೀಪಕ್ ಬೊಳುವಾರು, ನಿತಿನ್‌ಪ್ರಸಾದ್, ಸುಬ್ರಹ್ಮಣ್ಯ ಪ್ರಸಾದ್, ರೋಹಿತ್ ಬಿ., ಸೀಮಂತ್‌ಕುಮಾರ್, ಶಕುಂತಲಾ ವಿ.ಕೆ. ಶೆಟ್ಟಿ, ಉಷಾ, ಗೀತಾ ಚಂದ್ರಪ್ಪ ಕುಲಾಲ್ ಮತ್ತಿತರರು ಪಾಲ್ಗೊಂಡಿದ್ದರು.