ಸರ್ಕಾರಿ ಪ್ರೌಢಶಾಲೆ ಪಾಪೆಮಜಲು.. ಚದುರಂಗ ( ಚೆಸ್ ) ಕಲಿಕಾ ಶಿಬಿರ

0

ಅರಿಯಡ್ಕ: ಪಾಪೆಮಜಲು  ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಮೋನಪ್ಪ .ಬಿ ಪೂಜಾರಿ ಯವರ ನೇತೃತ್ವದಲ್ಲಿ ಗಣಿತ ಶಿಕ್ಷಕ ಹರಿಪ್ರಸಾದ್ ರವರ ಮಾರ್ಗದರ್ಶನದಲ್ಲಿ,  ಮಾ.29 ರಿಂದ ಚದುರಂಗ ಕಲಿಕಾ ಶಿಬಿರ ಆರಂಭಗೊಂಡಿತ್ತು.

19 ಹುಡುಗರು ಮತ್ತು 14 ಹುಡುಗಿಯರು ಶಿಬಿರದಲ್ಲಿ ಭಾಗವಹಿಸಿ ಚದುರಂಗ ತರಬೇತಿ ಪಡೆದರು. ಆರಂಭದಲ್ಲಿ ಚದುರಂಗದ ಕಾಯಿಗಳ ನಡೆಗಳು, ಆಕ್ರಮಣ ಮಾಡುವ ರೀತಿ, ಎರಡು ಕಾಯಿಗಳಿಗೆ ಏಕಕಾಲದಲ್ಲಿ ಆಕ್ರಮಣ ಮಾಡುವುದು ಹೇಗೆ. ಸೈನಿಕನಿಂದ, ಕುದುರೆಯಿಂದ, ರಥದಿಂದ, ಮಂತ್ರಿಯಿಂದ ಮತ್ತು ಸ್ವತಹ ರಾಜನಿಂದ ಇಬ್ಬರ ಮೇಲೆ ಏಕಕಾಲದಲ್ಲಿ ಆಕ್ರಮಣ ಮಾಡುವುದು, ಯುದ್ಧ ಗೆಲ್ಲುವ ತಂತ್ರಗಳು ಮತ್ತು ಯುದ್ಧದ ಕೊನೆಯ ಕಾಲದಲ್ಲಿ ವೈರಿ ರಾಜನನ್ನು ಸೆರೆಹಿಡಿಯುವುದು ಹೇಗೆ ಮುಂತಾದವುಗಳನ್ನು ಹೇಳಿಕೊಡಲಾಯಿತು ವಿದ್ಯಾರ್ಥಿಗಳೆಲ್ಲರೂ ಬಹಳ ಆಸಕ್ತಿಯಿಂದ ಈ ತರಬೇತಿಯಲ್ಲಿ ಭಾಗವಹಿಸಿದ್ದರು 4ನೇ ತಾರೀಕಿನಂದು ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ಕಲಿಕಾರ್ಥಿಗಳಾಗಿ ನಿಶಾಂತ, ರಕ್ಷಕ್, ಜಿತಿನ್ ಕುಮಾರ್, ಪುನೀತ್, ಮೂಡಿ ಬಂದಿರುತ್ತಾರೆ ಇವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು ಮುಂದಿನ ತರಬೇತಿಯಲ್ಲಿ ವ್ಯೂಹ ರಚನೆಗಳ ಬಗ್ಗೆ ತರಬೇತಿ ನೀಡಲಾಗುವುದು.

LEAVE A REPLY

Please enter your comment!
Please enter your name here