ಪುತ್ತೂರು: ಸವಣೂರು ಕನಡಕುಮೇರಿನಿಂದ ಬೊಬ್ಬರ್ಯಕಾಡು(ಕುಂಜಾಡಿ)ತನಕದ ಎರಡು ಕಿ.ಮೀ ದೂರ ವ್ಯಾಪ್ತಿಯ ರಸ್ತೆಯು ಅಗಲೀಕರಣಗೊಂಡಿದ್ದು, ಎ. 7 ರಂದು ಡಾಮರೀಕರಣ ಆರಂಭಗೊಂಡಿದೆ, ರಾಜ್ಯ ಸರಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಸಂಸದ ನಳಿನ್‌ಕುಮಾರ್ ಕಟೀಲ್ ಮತ್ತು ಸಚಿವ ಎಸ್.ಅಂಗಾರರವರ ವಿಶೇಷ ಮುತುವರ್ಜಿಯಿಂದಾಗಿ ಈ ರಸ್ತೆಯು ಡಾಮರೀಕರಣಗೊಳ್ಳುತ್ತಿದೆ. 2.5೦ ಕೋಟಿ, ರೂ ಅನುದಾನದಲ್ಲಿ ನಡೆಯುವ ಈ ಕಾಮಗಾರಿಯನ್ನು ಮಂಗಳೂರಿನ ಪವಿತ್ರ ಕನ್‌ಸ್ಟ್ರಕ್ಷನ್ ಗುತ್ತಿಗೆದಾರರಾದ ಬಾಲಕೃಷ್ಣರವರು ನಡೆಸುತ್ತಿದ್ದಾರೆ.
ಬೊಬ್ಬರ್ಯಕಾಡಿನಿಂದ ಕಾಪುತಕಾಡುತನಕ ರಸ್ತೆ ಡಾಮರೀಕರಣ ಶ್ರೀಘ ಆರಂಭ
ಬೊಬ್ಬರ್ಯಕಾಡಿನಿಂದ ಕಾಪುತಕಾಡು ತನಕದ ಮೂರು ಕಿ.ಮೀ, ರಸ್ತೆ ಅತೀ ಶ್ರೀಘ್ರದಲ್ಲಿ ಡಾಮರೀಕರಣಗೊಳ್ಳಲಿದೆ. ಅಲ್ಲದೇ ಕುಂಜಾಡಿಯಲ್ಲಿ ಇರುವ ಹಳೆಯ ಸೇತುವೆಯನ್ನು ತೆರವುಗೊಳಿಸಿ, ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾವನೆ ಕಳಿಸಲಾಗಿದ್ದು, ಅನುದಾನ ಶ್ರೀಘ್ರ ಮಂಜೂರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.