ಕ್ರೀಡಾಪಟುಗಳಿಗೆ ತರಬೇತಿ ಶಿಬಿರ ಸಮಾರೋಪ

0

ಅರಿಯಡ್ಕ: ಸರಕಾರಿ ಪ್ರೌಢಶಾಲೆ ಪಾಪಮಜಲು ಇಲ್ಲಿ ಕ್ರೀಡಾ ತರಬೇತಿ ಶಿಬಿರ ನಡೆಯಿತು. ಫಿಟ್ನೆಸ್ಟ್ರೈನಿಂಗ್, ಸರ್ಕ್ಯೂಟ್ಟ್ರೇನಿಂಗ್ಮೂಲಕ ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ಸೃಜನ ಶೀಲವ್ಯಾಯಾಮಗಳನ್ನು, ದೈಹಿಕ ಕಸರತ್ತುಗಳನ್ನು, ಮನರಂಜನಾ ಆಟಗಳನ್ನು ಆಡಿಸಲಾಗುತ್ತಿತ್ತು. ಬಿಡುವಿನ ಸಮಯದಲ್ಲಿ ಶಾಲಾ ಗಣಿತ ಅಧ್ಯಾಪಕರಾದ ಹರಿಪ್ರಸಾದ್ ಚದುರಂಗ ಆಟವನ್ನು ಆಡುವ ಕೌಶಲ್ಯವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ತಿಳಿಸಿಕೊಟ್ಟರು. ಒಟ್ಟು 9 ದಿನಗಳ ಕಾಲ ನಡೆದ ಈಶಿಬಿರದಲ್ಲಿ 8 ಮತ್ತು 9ನೇತರಗತಿಯ ಒಟ್ಟು 35 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರ ಸಮಾರೋಪ ಸಮಾರಂಭವು ಶಾಲಾ ಎಸ್ಡಿಎಂಸಿ ಕಾರ್ಯಾಧ್ಯಕ್ಷರಾದ ಶ್ರೀತಿಲಕ್ರೈಕುತ್ಯಾಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರವೀಣ ರೈಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕಿ ಪೂರ್ಣಿಮಾ ಪಿ, ಕಾರ್ಯಕ್ರಮವನ್ನು ಸಂಯೋಜಿಸಿದ ಶಾಲಾ ಮುಖ್ಯ ಶಿಕ್ಷಕರಾದ ಮೋನಪ್ಪ ಬಿ ಇವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ವಿದ್ಯಾರ್ಥಿನಿ ದೀಕ್ಷಿತಾ ಶಿಬಿರದ ವರದಿಯನ್ನು ಮಂಡಿಸಿದರು. ಶಿಬಿರಾರ್ಥಿಗಳಾದ ಭಾರ್ಗವರೈ, ರಕ್ಷಕ್, ನಿಶಾಂತ್ಪಿ, ಜಿತಿನ್ಕುಮಾರ್,ಅಭಿನವ್ , ಪ್ರಣ್ವಿತಾ, ಭವ್ಯಶ್ರೀ, ಪೂಜಶ್ರೀ, ಧನ್ಯಶ್ರೀ ,ನಯನಶ್ರೀ, ಶ್ರಾವ್ಯ, ಶ್ರೇಯ, ತೇಜಶ್ರೀ ಮೋಕ್ಷಾ ಶಿಬಿರದ ಅನುಭವಗಳನ್ನುಹಂಚಿಕೊಂಡರು. ಶಿಕ್ಷಕರಾದ ಹರಿಪ್ರಸಾದ್‌   ಶಿಬಿರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಕ್ರೀಡಾತರಬೇತುದಾರರಾಗಿ ತರಬೇತಿ ನೀಡಿದ ವಿದ್ಯಾರಶ್ಮಿ ಪದವಿ ಕಾಲೇಜು ಸವಣೂರು ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕಿ ಕುಮಾರಿಪೂರ್ಣಿಮಾ ಪಿ ನಿರಂತರವಾಗಿ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಕಾರ್ಯಾಧ್ಯಕ್ಷರಾದ ಶ್ರೀತಿಲಕ್ರೈಕುತ್ಯಾಡಿ ಮಾತನಾಡಿ ನಮ್ಮ ಶಾಲೆಯಲ್ಲಿ ನಿರಂತರವಾಗಿ ಶಿಕ್ಷಣದೊಂದಿಗೆ ಕ್ರೀಡಾ, ಸಾಂಸ್ಕೃತಿಕ ಮತ್ತು ಸಹ ಪಠ್ಯಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು ಇದರ ಎಲ್ಲಾ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು. ಶಾಲಾ ಹಿಂದಿ ಭಾಷಾ ಸಹ ಶಿಕ್ಷಕಿ ಹರಿಣಾಕ್ಷಿ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here