ಕೊಳ್ನಾಡು: ಅಡಿಕೆ ಕಳ್ಳತನ ಪ್ರಕರಣ ವಾಹನ, ಅಡಿಕೆ ಪೊಲೀಸ್ ವಶಕ್ಕೆ

0

ವಿಟ್ಲ: ಕೊಳ್ನಾಡು ಗ್ರಾಮದ ನೀರಪಳಿಕೆ ಬಾರೆಬೆಟ್ಟು ನಿವಾಸಿ ಮಹಮ್ಮದ್ ಮುಸ್ತಾಫ್  ಎಂಬವರ ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವುಗೈದ ಸೊತ್ತನ್ನು ವಿಟ್ಲ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 


ಫೆ.6ರಿಂದ ಫೆ. 7ರ ವರೆಗಿನ ಅವಽಯಲ್ಲಿ ಯಾರೋ ಕಳ್ಳರು ಸುಮಾರು 3500 ಅಡಿಕೆಯನ್ನು ಕಳ್ಳತನ ಮಾಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು . ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಗಾಣದಬೆಟ್ಟು ಎಂಬಲ್ಲಿಯ 4 ಜನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಈ ಕೃತ್ಯವನ್ನು ಎಸಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅವರಿಂದ ಕಳವುಗೈಯ್ಯಲಾಗಿದ್ದ ಸುಮಾರು 3500 ಅಡಿಕೆ ಹಾಗೂ ಪ್ರಕರಣದಲ್ಲಿ ಶಾಮೀಲಾದ 2 ಮೋಟಾರು ಸೈಕಲ್ ಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ವಿಟ್ಲ ಠಾಣಾ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here