ಆಲಂಕಾರು ಸಿ.ಎ ಬ್ಯಾಂಕ್‌ನಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಜ್ಞಾ ಆರ್. ಬಿಳ್ಕೋಡುಗೆ

0

ಆಲಂಕಾರು: ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಪ್ರಜ್ಞಾ ಆರ್. ರವರು ಜ. ೩೧ ರಂದು ಸೇವೆಯಿಂದ ವಯೋ ನಿವೃತ್ತಿಗೊಂಡಿದ್ದು ಅವರಿಗೆ ಬಿಳ್ಕೋಡುಗೆ ಕಾರ್ಯಕ್ರಮ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಸಭಾದ್ಯಕ್ಷತೆ ವಹಿಸಿದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಮಾತನಾಡಿ ಯಾವುದೇ ಸಂಸ್ಥೆ ಎತ್ತರಕ್ಕೆ ಬೆಳೆಯಬೇಕಾದರೆ ಸಿಬ್ಬಂದಿಗಳ ಸಹಕಾರ ಅತಿ ಅಗತ್ಯ. ಪ್ರಜ್ಞಾ ಆರ್.ರವರು ತನ್ನ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರು. ಜೀವನದಲ್ಲಿ ಕಷ್ಟ, ಸುಖಗಳ ಹಗಲು ರಾತ್ರಿ ಬಂದಂತೆ ಪ್ರಜ್ಞಾ ಆರ್. ರವರು ಕಷ್ಟ ಸುಖಗಳನ್ನು ಅತ್ಯಂತ ಸಮರ್ಥ ವಾಗಿ ಎದುರಿಸಿದವರು. ತಮ್ಮ ಸೇವಾವಧಿಯಲ್ಲಿ ಅಡಳಿತ ಮಂಡಳಿಯ ವತಿಯಿಂದ ಏನಾದರೂ ಬೇಸರ ವಾಗಿದ್ದರೆ ಕ್ಷಮಿಸಬೇಕು. ಸೇವಾ ನಿವೃತ್ತಿಯಾಗುತ್ತಿರುವ ಸಂಧರ್ಭದಲ್ಲಿ ತಾವೂ ಅತ್ಯಂತ ಖುಷಿಯಿಂದ ನಿರ್ಗಮಿಸುವಂತೆ ತಿಳಿಸಿ, ಪ್ರಜ್ಞಾ ಆರ್. ರವರು ತನ್ನ ಸೇವಾವಧಿಯಲ್ಲಿ ಮಾಡಿದ ಸಮಯಪಾಲನೆ, ಕಾರ್ಯತತ್ಪರತೆಯ ಅದರ್ಶವನ್ನು ಎಲ್ಲಾ ಸಿಬ್ಪಂಧಿಗಳು ಪಾಲನೆ ಮಾಡುವಂತೆ ತಿಳಿಸಿ ಪ್ರಜ್ಞಾ ಆರ್. ರವರ ನಿವೃತ್ತ ಜೀವನ ಸುಖಮಯವಾಗಿರಲೆಂದು ಹಾರೈಸಿದರು.

ಆಲಂಕಾರು ಸಿ.ಎ ಬ್ಯಾಂಕ್ ನಿರ್ದೇಶಕ ಜಿ.ಪಿ ಶೇಷಪತಿ ರೈ ಗುತ್ತುಪಾಲು, ಈಶ್ವರಗೌಡ ಪಜ್ಜಡ್ಕ, ಅಶಾತಿಮ್ಮಪ್ಪ ಗೌಡ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ, ಮ್ಯಾನೇಜರ್ ಸಂತೋಷ ರೈ ಸಬಳೂರು, ಪ್ರಜ್ಞಾ ಆರ್.ರವರ ಪುತ್ರ ರಕ್ಷಿತ್ ರಾಜ್, ಮಾತನಾಡಿ ವೃತ್ತಿಯಲ್ಲಿ ನಿವೃತ್ತಿ ಸಹಜ ಎಂದು ತಿಳಿಸಿ ನಿವೃತ್ತ ಜೀವನವೂ ಸುಖಮಯವಾಗಿರಲೆಂದು ಹಾರೈಸಿದರು. ಆಲಂಕಾರು ಸಿ.ಎ ಬ್ಯಾಂಕ್ ಹಾಗು ಸಿಬ್ಬಂದಿಗಳ ವತಿಯಿಂದ ಸೇವಾ ನಿವೃತ್ತಿಹೊಂದಿದ ಪ್ರಜ್ಞಾ ಆರ್.ರವರಿಗೆ ಸ್ಮರಣಿಕೆ, ಫಲವಸ್ತು ಬಂಗಾರದ ಎರಡು ಬಳೆ ತೊಡಿಸಿ ಹಾರ ಹಾಕಿ ಸನ್ಮಾಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಜ್ಞಾ ಆರ್ ರವರು ೧೯೮೬ ರಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ನಾನು ಆಲಂಕಾರು ಸಿ.ಎ ಬ್ಯಾಂಕ್‌ಗೆ ಕರ್ತವ್ಯಕ್ಕೆ ಸೇರಿದ್ದು ನಿಷ್ಠೆ ಹಾಗು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಸೇವಾವಧಿಯಲ್ಲಿ ಸಹಕರಿಸಿದ ಅಡಳಿತಮಂಡಳಿಯವರಿಗೆ, ಮುಖ್ಯಕಾರ್ಯನಿರ್ವಹಣಾಧಿಕಾರಿಯವರಿಗೆ ಹಾಗು ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿ ಆಲಂಕಾರು ಸಿ.ಎ ಬ್ಯಾಂಕ್ ದೇಶದಲ್ಲಿಯೇ ಬೆಳಗುವಂತಾಗಲಿ ಎಂದು ತಿಳಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ ಮನವಳಿಕೆ ಮಾತನಾಡಿ ಪ್ರಜ್ಞಾ ಆರ್. ರವರು ಆಲಂಕಾರು ಸಿ.ಎ ಬ್ಯಾಂಕ್‌ನಲ್ಲಿ ಸುಮಾರು ೧೭ ವರ್ಷ ಖಾಯಂ ಸಿಬ್ಬಂಧಿಯಾಗಿ ಸೇವೆ ಸಲ್ಲಿಸಿ ಅತ್ಯಂತ ಜವಾಬ್ದಾರಿಯುತವಾಗಿ, ಯಾವುದೇ ತರದ ಚ್ಯುತಿ ಬಾರದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದವರು ಅವರ ನಿವೃತ್ತ ಜೀವನವು ಸುಖಮಯವಾಗಿರಲೆಂದು ಹಾರೈಸಿದರು. ಸಂಘದ ನಿರ್ದೇಶಕ ಸಂತೋಷ್ ಕುಮಾರ್ ಪ್ರಾರ್ಥಿಸಿ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ ವಂದಿಸಿದರು. ಸಿಬ್ಬಂದಿ ಲೋಕನಾಥ ರೈ ಕೇಲ್ಕ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ರಾಮಚಂದ್ರ ಏಣಿತ್ತಡ್ಕ, ಮೋನಪ್ಪ ಕುಲಾಲ್ ಬೊಳ್ಳರೋಡಿ, ಅಣ್ಣು ನಾಯ್ಕ್, ನಳಿನಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ಲ್ಯಾಂಪ್ ಸೊಸೈಟಿಯ ಅಧ್ಯಕ್ಷರಾದ ಪೂವಪ್ಪ ನಾಯ್ಕ್ ಎಸ್. ಸೇರಿದಂತೆ ಸಂಘದ ಸಿಬ್ಬಂದಿಗಳು ಪ್ರಜ್ಞಾ ಆರ್.ರವರ ಸಂಬಂಧಿಕರು ಉಪಸ್ಥಿತರಿದ್ದರು.
     

LEAVE A REPLY

Please enter your comment!
Please enter your name here