ರಾಮಕುಂಜ: ರಾಮಕುಂಜ-ಹಳೆನೇರೆಂಕಿ-ಬಜತ್ತೂರು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ರಾಮಕುಂಜ ಗ್ರಾಮದ ಬದೆಂಜ ಕುಂಡಡ್ಕದಲ್ಲಿ ಪುನರ್‌ನಿರ್ಮಾಣಗೊಂಡ ಶ್ರೀ ಮಹಾಕಾಳಿ ಮತ್ತು ಪರಿವಾರ ದೈವಗಳ ಮಾಡದಲ್ಲಿ ಶ್ರೀ ಮಹಾಕಾಳಿ, ಶ್ರೀ ರಕ್ತೇಶ್ವರಿ, ಶ್ರೀ ಪಂಜುರ್ಲಿ, ಶ್ರೀ ಶಿರಾಡಿ, ಶ್ರೀ ಗುಳಿಗ ದೈವಗಳ ಪುನ: ಪ್ರತಿಷ್ಠೆ ಫೆ.೬ರಂದು ಬೆಳಿಗ್ಗೆ ಕರ್ಕಟಕ ಲಗ್ನದಲ್ಲಿ ನಡೆಯಿತು.
ಜೀರ್ಣೋದ್ಧಾರಗೊಂಡ ಮಾಡದಲ್ಲಿ ಫೆ.೪ರಿಂದ ಬ್ರಹ್ಮಶ್ರೀ ವೇದಮೂರ್ತಿ ವಾಗೀಶ ಶಾಸ್ತ್ರಿ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಫೆ.೬ರಂದು ಪ್ರಾತ:ಕಾಲ ಬಿಂಬ ಉಪಾದಿಗಳಿಗೆ, ಕಲಶಗಳಿಗೆ ಪೂಜೆ ನಡೆದು ೧೦-೪೦ರಿಂದ ೧೧.೨೬ರ ಕರ್ಕಟಕ ಲಗ್ನದಲ್ಲಿ ಶ್ರೀ ದೈವಗಳ ಪ್ರತಿಷ್ಠೆ ನಡೆದು ಕಲಶಾಭಿಷೇಕ, ನೈವೇದ್ಯ ಸಮರ್ಪಣೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ನಿರಂಜನ ಶರ್ಮ ಬದೆಂಜ, ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣ ರಾವ್ ಆತೂರು, ಉಪಾಧ್ಯಕ್ಷರಾದ ಜಿನ್ನಪ್ಪ ಕುಲಾಲ್ ಕುಂಡಡ್ಕ, ಎಲ್ಯಣ್ಣ ಪೂಜಾರಿ ಅರ್ವೆ, ಮೋನಪ್ಪ ಕುಲಾಲ್ ಬೊಳ್ಳರೋಡಿ, ಮೋಹನ್ ಕೆ.ಟಿ.ಕಂಪ, ವೇದಸ್ಯ ಕುಲಾಲ್ ಪಾದೆ, ಪ್ರಧಾನ ಕಾರ್ಯದರ್ಶಿ ರಮೇಶ್ ಕುಂಡಡ್ಕ, ಕೋಶಾಧಿಕಾರಿ ಕೆ.ಚಿತ್ತರಂಜನ್ ರಾವ್ ಬದೆಂಜ, ಕಾರ್ಯದರ್ಶಿಗಳಾದ ಕೆ.ವಿ.ಕುಲಾಲ್ ಕುಂಡಡ್ಕ, ಬಾಬು ಕುಲಾಲ್ ಪಾದೆ, ಸತೀಶ್ ಪೂಜಾರಿ ಅರ್ವೆ, ಶ್ವೇತಾ ಬದೆಂಜ, ಪ್ರೇಮಲತಾ ಪಂರ್ದಾಜೆ, ಪ್ರತಿಷ್ಠಾ ಸಮಿತಿ ಗೌರವಾಧ್ಯಕ್ಷ ಧರ್ಮಪಾಲ ರಾವ್ ಕಜೆ, ಅಧ್ಯಕ್ಷ ದಿವಾಕರ ರಾವ್ ಪಂಚವಟಿ, ಉಪಾಧ್ಯಕ್ಷರಾದ ಲೋಕನಾಥ ರೈ ಕೇರ್ಕ, ಪ್ರಶಾಂತ್ ಆರ್.ಕೆ., ಯೋಗೀಶ್ ಕುಲಾಲ್ ಅಜ್ಜಿಕುಮೇರು, ಎಲ್ಯಣ್ಣ ಗೌಡ ನೂಜಿಲೆ, ಸದಾಶಿವ ಶೆಟ್ಟಿ ಮಾರಂಗ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗೌಡ ಬೈರಕಂಡ, ಕೋಶಾಧಿಕಾರಿ ತೇಜಕುಮಾರ್ ರೈ ವಳಂಜ, ಕಾರ್ಯದರ್ಶಿಗಳಾದ ಶಶೀಂದ್ರ ಅಜ್ಜಿಕುಮೇರು, ಶೇಖರ ಗೌಡ ಆನ, ರಾಧಾಕೃಷ್ಣ ಗೌಡ ಆನ, ಸತೀಶ್ ಪೂಜಾರಿ ಆರಿಂಜ, ಹರೀಶ್ ಕುಲಾಲ್ ಹೊಸಗದ್ದೆ, ಕರುಣಾಕರ ದೊಡ್ಡ ಉರ್ಕ ಸೇರಿದಂತೆ ಗೌರವ ಸಲಹೆಗಾರರು, ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರುಗಳ ಉಪಸ್ಥಿತರಿದ್ದರು.