ಪುಣ್ಚಪ್ಪಾಡಿ, ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು, ಪರಿವಾರ ದೈವಗಳ ಧರ್ಮ ನಡಾವಳಿ ಜಾತ್ರೋತ್ಸವ

0


ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಫೆ. 15 ಮತ್ತು 16 ರಂದು ಶ್ರೀ ಧರ್ಮಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಜಾತ್ರೋತ್ಸವ ಜರಗಿತು.  ಫೆ.15 ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ವೇದಮೂರ್ತಿ ಕೇಶವ ಕಲ್ಲೂರಾಯ ಬಂಬಿಲರವರ ನೇತೃತ್ವದಲ್ಲಿ ಬೆಳಿಗ್ಗೆ 9ರಿಂದ ಶ್ರೀ ಗಣಪತಿ ಹೋಮ, ನಾಗತಂಬಿಲ, ಗೊನೆ ಕಡಿಯುವುದು, ದೈವಗಳ ತಂಬಿಲ, ಬೊಟ್ಟಿ ಭೂತ ತಂಬಿಲ, ಸಂಜೆ ೪ ರಿಂದ ನೇರೊಳ್ತಡ್ಕದಿಂದ ಕಲ್ಲ ಮಾಡದವರೆಗೆ ಹಸಿರುವಾಣಿ ಮೆರವಣಿಗೆ ನಡೆಯಿತು. ವಿಜಯ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಎ.ಕೃಷ್ಣ ರೈ ಪುಣ್ಚಪ್ಪಾಡಿಬೀಡುರವರು ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಿದರು. ಸಂಜೆ 5.30 ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ ಜರಗಿತು.


ಭಜನಾ ಕಾರ್ಯಕ್ರಮದಲ್ಲಿ ಮಹಿಳಾ ಭಜನಾ ತಂಡ ಬೆಟ್ಟಂಪಾಡಿ, ಉಮಾಮಹೇಶ್ವರಿ ಭಜನಾ ತಂಡ ಬಲ್ಪ ಹಾಗೂ ಶಾಂತಾ ದುರ್ಗಾ ಕುಣಿತ ಭಜನಾ ತಂಡ ನಿಡ್ಪಳ್ಳಿರವರುಗಳು ಭಾಗವಹಿಸಿದರು. ಸಂಜೆ 7 ರಿಂದ ಶ್ರೀ ಧರ್ಮಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಕಿರುವಾಳು ಭಂಡಾರ ಮೂಲಸ್ಥಾನದಿಂದ ಕಲ್ಲಮಾಡಕ್ಕೆ ರುವುದು. ಸಂಜೆ. 7.15 ರಿಂದ ಸಾರಕರೆ ಬೆಡಿ ಪ್ರದರ್ಶನ, ರಾತ್ರಿ ೮.೩೦ರಿಂದ ಅನ್ನಸಂತರ್ಪಣೆ ಜರಗಿತು.


ಕರಸೇವಕರಿಗೆ ಸೀರೆ ವಿತರಣೆ
೩೦ ಮಂದಿ ಮಹಿಳಾ ಕರಸೇವಕರಿಗೆ ಸೀರೆ ಹಾಗೂ ಸ್ವಯಂಸೇವಕರಿಗೆ ಕೇಸರಿ ಶಾಲು ಮತ್ತು ಮುಂಡು ವಿತರಿಸಲಾಯಿತು. ಫೆ. ೧೬ ರಂದು ಬೆಳಿಗ್ಗೆ ೭.೩೦ಕ್ಕೆ ಉಪಹಾರ, ಬೆಳಿಗ್ಗೆ ೮.೩೦ ರಿಂದ ಎಲ್ಕಾರ್ ಉಳ್ಳಾಕುಲು ದೈವದ ಓಲಸರಿ ನೇಮೋತ್ಸವ. ಬೆಳಿಗ್ಗೆ ೧೧ರಿಂದ ಮಲ್ಲಾರ್ ಉಳ್ಳಾಕುಲು ದೈವದ ಓಲಸರಿ ನೇಮೋತ್ಸವ, ಮಧ್ಯಾಹ್ನ ೧೨.೩೦ ರಿಂದ ಅನ್ನಸಂತರ್ಪಣೆ ನಡೆಯಿತು. ಪುಣ್ಚಪ್ಪಾಡಿ ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನದ ಆಡಳಿತ ಮೋಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರೀತಿ ಎಂ.ಶೆಟ್ಟಿ, ದೇವಿಚರಣ್ ಶೆಟ್ಟಿ, ಶ್ರದ್ಧಾ ಶೆಟ್ಟಿ ಸಾರಕರೆಬೀಡು, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ,ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ನೂಜಿ, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟ್ಟು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಸವಣೂರು ಗ್ರಾ.ಪಂ, ಸದಸ್ಯ, ಗಿರಿಶಂಕರ್ ಸುಲಾಯ ದೇವಶ್ಯ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಪುತ್ತೂರು ತುಳುಕೂಟದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಶ್ರೀ ಧರ್ಮಅರಸು ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷ ದಿಲೀಪ್ ಹೆಗ್ಡೆ, ಕಾರ್‍ಯದರ್ಶಿ ಕರುಣಾಕರ ಗೌಡ ಸಾರಕರೆ ಹಾಗೂ ಪದಾಧಿಕಾರಿಗಳು, ವಿಜಯ ಬ್ಯಾಂಕ್ ನಿವೃತ್ತ ಅಧಿಕಾರಿ ಕೃಷ್ಣ ರೈ ಪುಣ್ಚಪ್ಪಾಡಿ, ಪದ್ಮಾಕ್ಷಿ ರೈ, ಕೃಷ್ಣಪ್ಪ ಗೌಡ, ಹಿರಿಯರಾದ ಕೃಷ್ಣಪ್ಪ ಮಲೆಕುಡಿಯ ಬದಿಯಡ್ಕ, ಪ್ರಕಾಶ್ ರೈ ಸಾರಕರೆ, ಸೋಮಪ್ಪ ಪೂಜಾರಿ, ಅಶೋಕ್ ಕುಮಾರ್, ಸುಂದರ ಗೌಡ, ಸಾಂತಪ್ಪ ಗೌಡ, ಕಿಶೋರ್ ಕುಮಾರ್, ರಮೇಶ್ ಬೊಳ್ಳಾಜೆ, ಸುಧಾಕರ್ ಬೊಳ್ಳಾಜೆ, ಗಣೇಶ್ ಕಾರೆತ್ತೋಡಿ, ಅಣ್ಣಿನೆಕ್ಕಿ, ಬೇಡು ಗುರಿಯಡ್ಕ, ಸೂರಪ್ಪ ಗೌಡ ಬದಿಯಡ್ಕ, ನಾರಾಯಣ ಪುಣ್ಚಪ್ಪಾಡಿ, ಆನಂದ ಒಡಂತರ್ಯ, ಪುಟ್ಟಣ್ಣ ಗೌಡ ಬದಿಯಡ್ಕ, ಸಂಜೀವ ಶೆಟ್ಟಿ ಕೊಮ್ಮಂಡ, ರಮೇಶ್ ಶೆಟ್ಟಿ ಕೊಮ್ಮಂಡ, ಜಗನ್ನಾಥ ಶೆಟ್ಟಿ ಕೊಮ್ಮಂಡ, ಕರುಣಾಕರ ಶೆಟ್ಟಿ ಕೊಮ್ಮಂಡ, ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ್ ರೈ ದೇವಶ್ಯ, ಬಾಲಕೃಷ್ಣ ರೈ ದೇವಶ್ಯ, ಲತನ್ ರೈ, ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಸವಣೂರು ಗ್ರಾಮ ದೈವ ಜೀಣ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಜ್ವಲ್ ಕೆ.ಆರ್ ಕೋಡಿಬೈಲು, ರಾಜರಾಮ್ ರೈ ಕಲಾಯಿ, ನವೀನ್ ರೈ ಅಲಂಕಾರು, ಪ್ರಸಾದ್ ರೈ ಪುಣ್ಚಪ್ಪಾಡಿ, ಜಯರಾಮ ರೈ ಪರನೀರು, ಹರೀಶ್ ತೋಟದಡ್ಕ , ಡಿಸಿಸಿ ಬ್ಯಾಂಕ್‌ನ ಸತೀಶ್ ನಾಯಕ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂದಾಳುಗಳು ಸಾವಿರಾರು ಮಂದಿ ಭಾಗವಹಿಸಿದ್ದರು.

ಕಾರ್‍ಯಕ್ರಮ ಯಶಸ್ವಿಯಾಗಿ ಮೂಡಿಬರಲು ಕಾರ್‍ಯಕರ್ತರ ಶ್ರಮವೇ ಕಾರಣ

ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಬೀಡುವಿನಲ್ಲಿ ಶ್ರೀ ಧರ್ಮ ಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಜಾತ್ರೆಯು ಯಶಸ್ಸಿಯಾಗಿ ನಡೆದಿದೆ. ಈ ಕಾರ್‍ಯಕ್ರಮದ ಯಶಸ್ಸಿಗೆ ಕಾರ್‍ಯಕರ್ತರ ಪೂರ್ಣ ಶ್ರಮ, ಊರ-ಪರವೂರ ಭಕ್ತಾಭಿಮಾನಿಗಳ ಸಹಕಾರ ಕಾರಣವಾಗಿದೆ. ಸಾರಕರೆ ಬೀಡು ದಿ.ನಾರಾಯಣ ರೈರವರ ಆಶೀರ್ವಾದ ಸದಾ ಇದೆ. ಅನೇಕ ಪವಾಡಗಳು ಈ ಕ್ಷೇತ್ರದಲ್ಲಿ ನಡೆದಿದೆ. ಸಂತಾನ ಪ್ರಾಪ್ತಿ, ಆರೋಗ್ಯ, ಅಭಿವೃದ್ಧಿಯ ಬಗ್ಗೆ ಪ್ರಾರ್ಥಿಸಿದಲ್ಲಿ ಶೀಘ್ರ ಪರಿಹಾರ ಸಿಕ್ಕಿರುವ ಉದಾಹರಣೆ ಇದೆ. ಕ್ಷೇತ್ರದಲ್ಲಿ ಮುಂದೆಯೂ ಅನೇಕ ಅಭಿವೃದ್ಧಿಪರ ಕೆಲಸಗಳು ನಡೆಯಲಿದೆ. ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯ.
ಮಹಾಬಲ ಶೆಟ್ಟಿ ಕೊಮ್ಮಂಡ ಆಡಳಿತ ಮೋಕ್ತೇಸರ, ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನ ಪುಣ್ಚಪ್ಪಾಡಿ ಸಾರಕರೆ ಬೀಡು

LEAVE A REPLY

Please enter your comment!
Please enter your name here