ನಾಳೆ (ಫೆ.26) – ಬೆಟ್ಟಂಪಾಡಿ ಬಿಲ್ವಗಿರಿಯಲ್ಲಿ ಕಟೀಲು ಶ್ರೀ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ

0

 

ಪುತ್ತೂರು: ಯಕ್ಷಗಾನ ಬಯಲಾಟ ಸೇವಾ ಸಮಿತಿ ಬೆಟ್ಟಂಪಾಡಿ ವತಿಯಿಂದ 37 ನೇ ವರ್ಷದ ಹತ್ತು ಸಮಸ್ತರ ಸೇವೆಯ ಬಯಲಾಟ ಫೆ. 26 ರಂದು ರಾತ್ರಿ ಬೆಟ್ಟಂಪಾಡಿ ಬಿಲ್ವಗಿರಿಯಲ್ಲಿ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಕಥಾನಕವನ್ನು ಆಡಿ ಅಭಿನಯಿಸಲಿದ್ದಾರೆ. ಸಂಜೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಶ್ರೀದೇವಿಯ ಶೋಭಾಯಾತ್ರೆ ಬೆಟ್ಟಂಪಾಡಿ ಬಿಲ್ವಗಿರಿಗೆ ತೆರಳಿದೆ. ರಾತ್ರಿ 8.30 ಕ್ಕೆ ಬಿಲ್ವಗಿರಿಯಲ್ಲಿ ಚೌಕಿಪೂಜೆ ನಡೆದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಯಕ್ಷಗಾನ ಬಯಲಾಟ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

 

LEAVE A REPLY

Please enter your comment!
Please enter your name here