ಕೋಂಟ್ರುಪ್ಪಾಡಿ ತಿರುವಿನಲ್ಲಿ ತ್ಯಾಜ ಎಸೆತ – ಕೊಡಿಪಾಡಿ ಗ್ರಾ.ಪಂ ಪಿಡಿಒ, ಸದಸ್ಯೆಯ ನೇತೃತ್ವದಲ್ಲಿ ಸ್ವಚ್ಚತೆ  – ಕಸ ಎಸೆಯದಂತೆ ಮನವಿ

0

ಪುತ್ತೂರು: ಕೊಡಿಪಾಡಿ ಗ್ರಾಮದ ಕೋಂಟ್ರುಪ್ಪಾಡಿ ತಿರುವಿನಲ್ಲಿ ತ್ಯಾಜ್ಯ ಎಸೆಯದಂತೆ ಫ್ಲೆಕ್ಸ್ ಅಳವಡಿಸಿದ್ದರು  ಬೇಕಾಬಿಟ್ಟಿಯಾಗಿ ಗೋಣಿಚೀಲಗಳಲ್ಲಿ ತುಂಬಿಸಿ ತ್ಯಾಜ್ಯ ಎಸೆದು ಹೋಗಿರುವ  ಹಿನ್ನೆಲೆಯಲ್ಲಿಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶರೀಫ್ ಹಾಗೂ ಗ್ರಾ.ಪಂ ಸದಸ್ಯೆ ಸ್ಮೀತಾ ಹಣಿಯೂರುರವರ ನೇತೃತ್ವದಲ್ಲಿ  ಕಾರ್ಯದರ್ಶಿ ಭವಾನಿ  ಹಾಗೂ ಸಿಬ್ಬಂದಿಗಳಾದ ಪ್ರಶಾಂತ್ ಹಾಗೂ ಕಿಸನ್ ರವರ ಅದನ್ನು ತೆರವುಗೊಳಿಸಿ ಸ್ವಚ್ಚತೆ ಮಾಡಿರುವ ಘಟನೆ ನಡೆದಿದೆ.

ಕೋಂಟ್ರುಪ್ಪಾಡಿ ತಿರುವುನಲ್ಲಿ ಈ ಹಿಂದಿನಿಂದ ತ್ಯಾಜ್ಯ ಎಸೆಯುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಗ್ರಾ.ಪಂ ವತಿಯಿಂದ  ಕಸ ಎಸೆಯದಂತೆ ಬ್ಯಾನರ್ ಅಳವಡಿಕೆ‌ ಮಾಡಲಾಗಿತ್ತು. ಆದರೆ ಇದೀಗ ಗೋಣಿಚೀಲದಲ್ಲಿ ತುಂಬಿಸಿ ಕಸವನ್ನು ಆ ಜಾಗದಲ್ಲೇ ಮತ್ತೆ ಎಸೆಯಾಗಿತ್ತು. ಇದನ್ನು ಕಂಡ ತಂಡ ಅದನ್ನು ತೆರವುಗೊಳಿಸಿ ಸ್ವಚ್ಚತೆ ಮಾಡಿದೆ.

ಇನ್ನು ಮುಂದಿನ ದಿನಗಳಲ್ಲಿ ಎಲ್ಲೊಂದರಲ್ಲಿ ಕಸ ಎಸೆಯದಂತೆ ಮನವಿ ಮಾಡಿರುವ ಗ್ರಾ.ಪಂ ಅಧಿಕಾರಿಗಳು ಯಾರಾದರೂ ಕಸ ಎಸೆಯುತ್ತಿರುವುದು ಕಂಡು ಬಂದಲ್ಲಿ ಗ್ರಾ.ಪಂ ದೂರವಾಣಿ‌ ಸಂಖ್ಯೆ8246666678ಗೆ ಕರೆಮಾಡಿ ತಿಳಿಸುವಂತೆ ಮನವಿ‌ ಮಾಡಿದ್ದಾರೆ. ಗ್ರಾಪಂ ವತಿಯಿಂದ ನಡೆದ ಸ್ವಚ್ಚತಾ  ನಾಗರಿಕರಿಂದ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here