ಪುತ್ತೂರು: ಬನ್ನೂರು ಅಯೋದ್ಯಾನಗರದಲ್ಲಿರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಶಿವರಾತ್ರಿಯ ಹಿನ್ನಲೆಯಲ್ಲಿ ಫೆ.28 ರಂದು ನೃತ್ಯ ಭಜನೆ ಮತ್ತು ನಗರ ಭಜನೆ ನಡೆಯಿತು.
ಬಾಳಿಲ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲಾ ಭಜನಾ ಮಂಡಳಿಯಿಂದ ಸಂಜೆ ಮಂದಿರದ ವಠಾರದಲ್ಲಿ ನೃತ್ಯ ಭಜನೆ ನಡೆಯಿತು. ಮಂದಿರದ ಅರ್ಚಕ ರಘುರಾಮ್ ಭಟ್ ನೃತ್ಯ ಭಜನೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ, ಗೌರವಾಧ್ಯಕ್ಷ ಉದಯ ಕುಮಾರ್, ಚಂದ್ರಶೇಖರ್, ಮೋಹನ್ ಜೈನ್, ದಯಾನಂದ, ಶೇಖರ್ ಬಿರ್ವ, ನಗರಸಭಾ ಸದಸ್ಯೆ ಮೋಹಿನಿ ವಿಶ್ವನಾಥ ಗೌಡ, ಗೌರಿ ಬನ್ನೂರು, ಪ್ರೇಮಲತಾ ನಂದಿಲ, ಸ್ಥಳೀಯರಾದ ಜ್ಯೋತಿ ಆರ್ ನಾಯಕ್, ರಾಮ್ ದಾಸ್ ಹಾರಾಡಿ, ಅಶೋಕ್ ಭಟ್, ಕೇಶವ ಆಚಾರ್ಯ, ನಿತ್ಯಾನಂದ, ದೇವ್ ದಾಸ್ ಆಚಾರ್ಯ, ಮಲ್ಲೇಶ್ ಆಚಾರ್ಯ, ಮುರಳೀಧರ, ಹರೀಶ್ ಆಚಾರ್ಯ, ರಾಧಾಕೃಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಗರ ಭಜನೆ ನಡೆಯಿತು. ಬನ್ನೂರು ಕರ್ಮಲ, ಪಡೀಲು, ಹಾರಾಡಿಯಾಗಿ ನಗರಭಜನೆ ನಡೆಯಿತು.