ಉಪ್ಪಿನಂಗಡಿಯಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಳದಲ್ಲಿ ಮಹಾಕಾಳಿ ಮೆಚ್ಚಿ

0


ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳ ಪ್ರಕಾರದ ಮಹಾಕಾಳಿ ಮೆಚ್ಚಿ ಮಾ.8ರಂದು ನಡೆಯಿತು.

ಮೆಚ್ಚಿ ಜಾತ್ರೆಯಲ್ಲಿ ಶ್ರೀ ದೇವಿಗೆ ಕುಂಕುಮಾರ್ಚನೆ ಸೇವೆ, ಹೂವಿನ ಪೂಜೆ ನಡೆಯಿತು. ಭಕ್ತಾದಿಗಳ ಮಾಹಾಪೂರವೇ ಹರಿದು ಬಂದು, ಕಾರ್‍ಯಕ್ರಮದಲ್ಲಿ ಭಾಗವಹಿಸಿ ಪುನೀತರಾದರು. ಇದರ ಅಂಗವಾಗಿ ರಾತ್ರಿ ಗಂಟೆ ೭-೩೦ರಿಂದ ಯಕ್ಷಶ್ರೀ ಮಹಿಳಾ ಯಕ್ಷಗಾನ ತಂಡ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ಕಾರ್‍ಯಕ್ರಮ ನಡೆಯಿತು. ದೇವಳದ ವತಿಯಿಂದ ಅನ್ನಸಂತರ್ಪಣೆ ಕಾರ್‍ಯಕ್ರಮ ನಡೆದು, ಸುಮಾರು ೫ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಅನ್ನ ಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಸಮಿತಿ ಸದಸ್ಯರಾದ ಜಯಂತ ಪೊರೋಳಿ, ಹರೀಶ್ ಉಪಾಧ್ಯಾಯ, ಹರಿರಾಮಚಂದ್ರ, ಸುನಿಲ್, ಮಹೇಶ್ ಬಜತ್ತೂರು, ರಾಮ ನಾಯ್ಕ್, ಹರಿಣಿ, ಪ್ರೇಮಲತಾ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಸುಂದರ ಗೌಡ, ಕಂಗ್ವೆ ವಿಶ್ವನಾಥ ಶೆಟ್ಟಿ, ಉಪ್ಪಿನಂಗಡಿ ಶಾರದೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಸ್ಥಳೀಯ ಪ್ರಮುಖರಾದ ಇಂಜಿನಿಯರ್ ಸುಧಾಕರ್, ರವೀಂದ್ರ ದರ್ಬೆ, ಚಿದಾನಂದ ನಾಯಕ್, ಗೋಪಾಲ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪಕ ವೆಂಕಟೇಶ್ ರಾವ್, ಪದ್ಮನಾಭ, ಕೃಷ್ಣ ಪ್ರಸಾದ್ ಬಡಿಲ, ದಿವಾಕರ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here