ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ ಶಿಕ್ಷಕರಿಗೆ ಬೀಳ್ಕೊಡುಗೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0
  • ಸಾಧಿಸುವ ಛಲವಿದ್ದಲ್ಲಿ ಜೀವನದಲ್ಲಿ ಯಶಸ್ಸು ಖಚಿತ; ಸ್ಕರಿಯಾ ರಂಬಾನ್

 

ನೆಲ್ಯಾಡಿ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಹಾಗೂ ಸಾಧಿಸುವ ಛಲ ಇರಬೇಕು. ಆಗ ಯಶಸ್ಸು ಖಚಿತ ಎಂದು ವೆ|ರೆ| ಸ್ಕರಿಯಾ ರಂಬಾನ್‌ರವರು ಹೇಳಿದರು. ಅವರು ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನಲ್ಲಿ ನಡೆದ ಸೇವೆಯಿಂದ ನಿರ್ಗಮಿಸುತ್ತಿರುವ ಶಿಕ್ಷಕರ ವಿದಾಯ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರು ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆಯ ಬಗ್ಗೆಯೂ ಪ್ರಸ್ತಾಪಿಸಿದ ವೆ|ರೆ| ಸ್ಕರಿಯಾ ರಂಬಾನ್‌ರವರು ವಿದಾಯಗೊಳ್ಳುತ್ತಿರುವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲ ರೆ|ಫಾ| ತೋಮಸ್ ಬಿಜಿಲಿಯವರು ಅಧ್ಯಕ್ಷತೆ ವಹಿಸಿದ್ದರು. ಸಾಪಿಯೆನ್ಶಿಯಾ ಬೆಥನಿ ಫಸ್ಟ್ ಗ್ರೇಡ್ ಕಾಲೇಜಿನ ಉಪಪ್ರಾಂಶುಪಾಲ ರೆ|ಫಾ| ಜಿಜನ್ ಅಬ್ರಹಾಂ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ, ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿನ ಉಪಪ್ರಾಂಶುಪಾಲ ಜೋಸ್ ಎಂ.ಜೆ., ಜ್ಞಾನೋದಯ ಬೆಥನಿ ಪಿ.ಯು. ಕಾಲೇಜಿನ ಉಪ ಪ್ರಾಂಶುಪಾಲ ಸುಶಿಲ್ ಕುಮಾರ್, ಹೈಸ್ಕೂಲ್ ವಿಭಾಗದ ಮುಖ್ಯಗುರು ಜೋರ್ಜ್ ಕೆ ತೋಮಸ್, ಪ್ರೈಮರಿ ವಿಭಾಗದ ಮುಖ್ಯಗುರು ಜೋಸ್ ಪ್ರಕಾಶ್‌ರವರು ಶುಭ ಹಾರೈಸಿದರು.

ಸನ್ಮಾನ:
ಸೇವೆಯಿಂದ ನಿರ್ಗಮಿಸುತ್ತಿರುವ ಶಿಕ್ಷಕರಾದ ವೀಣಾ ಹಾಗೂ ಜೆಸಸಿಯಮ್ಮರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರತಿ ತರಗತಿಯ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಪ್ರಾಂಶುಪಾಲರ ವಿಶೇಷ ಪುರಸ್ಕಾರಕ್ಕೆ ಅರ್ಹರಾದ ಉತ್ತಮ ನಾಯಕತ್ವ ಹಾಗೂ ಇನ್ನಿತರ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಶೆರ್ವಿನ್ ಶಾಜಿಯವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು.

ಜೈನಾಬ್ ಫಿದಾ ಸ್ವಾಗತಿಸಿ, ಮೋನಿಷಾ ವಂದಿಸಿದರು. ಕ್ರಿಸ್ಮಾ ಕಾರ್ಯಕ್ರಮ ನಿರೂಪಿಸದರು. ಶಿಕ್ಷಕಿ ಎಲಿಸಬೆತ್ ವಿದಾಯಗೊಳ್ಳುತ್ತಿರುವ ಶಿಕ್ಷಕರನ್ನು ಪರಿಚಯಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮದ ನೇತೃತ್ವವನ್ನು ಶಿಕ್ಷಕಿ ಅಕ್ಷತಾ ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here