ಪುತ್ತೂರು: ಕಣಿಯೂರು ಪೈಕ ಕುಟುಂಬಸ್ಥರ ತರವಾಡು ಮನೆಯಲ್ಲಿ ಧರ್ಮದೈವ ರುದ್ರಚಾಮುಂಡಿ, ಮಲರಾಯಿ ಹಾಗೂ ಪರಿವಾರ ದೈವಗಳ ಧರ್ಮನಡಾವಳಿ ಮಾ.12 ಮತ್ತು 13ರಂದು ನಡೆಯಿತು.
ಮಾ.12ರಂದು ಸಂಜೆ ಧರ್ಮದೈವ ರುದ್ರಚಾಮುಂಡಿ, ಮಲರಾಯಿ ಮತ್ತು ಪರಿವಾರ ದೈವಗಳ ಭಂಡಾರ ತೆಗೆದು ರಾತ್ರಿ ಕಲ್ಲುರ್ಟಿ ದೈವದ ನೇಮೋತ್ಸವ ನಂತರ ಅನ್ನಸಂತರ್ಪಣೆ, ಬಳಿಕ ಮಲರಾಯಿ, ಪಿಲಿಚಾಮುಂಡಿ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಜಾವತೆ ದೈವಗಳ ನೇಮೋತ್ಸವ ನಡೆಯಿತು. ಮಾ.13ರಂದು ಬೆಳಿಗ್ಗೆ ಧರ್ಮದೈವ ರುದ್ರಚಾಮುಂಡಿ ದೈವ ನಂತರ ಗುಳಿಗ ದೈವದ ನೇಮೋತ್ಸವ, ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಮೋಹಿನಿ ಪೈಕ ಮತ್ತು ಮಕ್ಕಳು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು