ಒಳಮೊಗ್ರು: ಶಾಸಕರಿಂದ ವಿವಿಧ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ

0

ಪುತ್ತೂರು: ಒಳಮೊಗ್ರು ಗ್ರಾಮದ ವಿವಿಧ ಕಡೆಗಳಲ್ಲಿ ಶಾಸಕರ ಅನುದಾನದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರುರವರು ಮಾ.20 ರಂದು ನೆರವೇರಿಸಿದರು. ದರ್ಬೆತ್ತಡ್ಕ ಶಾಲಾ ಬಳಿ ಸುಮಾರು ರೂ. 2 ಲಕ್ಷ ವೆಚ್ಚದ ಹೈಮಾಸ್ಕ್ ಲೈಟ್‌ಗೆ ಶಿಲಾನ್ಯಾಸ, ಸುಮಾರು 4 ಲಕ್ಷ ವೆಚ್ಚದ ಶಾಲಾ ಶೌಚಾಲಯದ ವೀಕ್ಷಣೆ, 20 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ದರ್ಬೆತ್ತಡ್ಕ ಪಲ್ಲತ್ತಾರು ರಸ್ತೆ ಉದ್ಘಾಟನೆ, ಸುಮಾರು ೧೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಜೆ ಗೋವಿಂದಮೂಲೆ ಸಂಪರ್ಕ ಸೇತುವೆಗೆ ಶಿಲಾನ್ಯಾಸ, 10 ಲಕ್ಷ ರೂ.ವೆಚ್ಚದ ಪರ್ಪುಂಜ ಕಲ್ಲಡ್ಕ ರಸ್ತೆ ಶಿಲಾನ್ಯಾಸ, 10 ಲಕ್ಷ ರೂ.ವೆಚ್ಚದ ದರ್ಬೆತ್ತಡ್ಕ ಪಲ್ಲತ್ತಾರು ಕಲ್ಲಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ, ೧೨ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಚಿಲ್ಮೆತ್ತಾರು ಕಲ್ಲಡ್ಕ ಕಾಲು ಸಂಕದ ಉದ್ಘಾಟನೆಯನ್ನು ನೆರವೇರಿಸಿದರು.

 


ಈ ಸಂದರ್ಭದಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಒಳಮೊಗ್ರು ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ರಾಜೇಶ್ ರೈ ಪರ್ಪುಂಜ, ಜಿಲ್ಲಾ ಎಸ್.ಟಿ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ, ಪಂಚಾಯತ್ ಸದಸ್ಯರುಗಳಾದ ರೇಖಾ ಯತೀಶ್ ಬಿಜತ್ರೆ, ಪ್ರದೀಪ್ ಎಸ್, ಬೂತ್ ಸಮಿತಿ ಅಧ್ಯಕ್ಷ ಪ್ರವೀಣ್ ಪಲ್ಲತ್ತಾರು, ಪ್ರಮುಖರಾದ ಬಾಲಕೃಷ್ಣ ರೈ ಗೋವಿಂದಮೂಲೆ, ವಸಂತ ಗೌಡ ಉರ್ವ, ಪ್ರಕಾಶ್ಚಂದ್ರ ರೈ ಕೈಕಾರ, ಶ್ರೀನಿವಾಸ ರೈ ಕುಂಬ್ರ, ಸುಧಾಕರ ಆಳ್ವ, ಜಯರಾಮ್ ರೈ ನೀರ್ಪಾಡಿ, ಪುರಂದರ ಶೆಟ್ಟಿ ಮುಡಾಲ, ಶ್ರೀನಿವಾಸ ಮುಡಾಲ, ರಾಧಾಕೃಷ್ಣ ರೈ , ರಮೇಶ್ ರೈ ಪಡ್ಪು ಸೇರಿದಂತೆ ಪಕ್ಷದ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here