ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಬಾನೊಟ್ಟು ಶ್ರೀ ಉಮಾಮಹೇಶ್ವರ ದೇವಾಲಯದ ಜೀರ್ಣೋದ್ಧಾರ ಕುರಿತು ಮೊದಲ ಬಾರಿಗೆ ಗ್ರಾಮದ ಪ್ರಮುಖರ ಸಮ್ಮಿಲನ ಹಾಗೂ ಪ್ರಥಮ ಸಮಾಲೋಚನಾ ಸಭೆಯು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ತಾನದ ಅನ್ನಪೂರ್ಣ ಹಾಲ್ ನಲ್ಲಿ ನಡೆಯಿತು.
ಮಾಣಿಗುತ್ತು ಸಚಿನ್ ರೈ,ನೂಜಿಬೈಲ್ ರವಿಶರ್ಮ, ಮಜಿ ತಿರುಮಲ ಕುಮಾರ್, ಹರೀಶ್ ಕುಮಾರ್ ಶೆಟ್ಟಿ ಸಾಗು ಹೊಸಮನೆ, ಪಳ್ಳತ್ತಡ್ಕ ಶಂಕರನಾರಾಯಣ ಭಟ್,ಪುಷ್ಪರಾಜ ಚೌಟ,ಗಣೇಶ ರೈ ಸಾಗು, ಬುಡೋಳಿ ಅಪ್ರಾಯ ಪೈ, ಮೋಹನ್ ಪೈ ಮಾಣಿ, ಗೋಪಾಲ ಪೈ ಮಾಣಿ, ಆನಂದ ಕುಲಾಲ್ ಬಾನೊಟ್ಟು, ಗೋಪಾಲ ಮೂಲ್ಯ ಶಂಭುಗ ,ಈಶ್ವರ ಭಟ್ ಲಕ್ಕಪ್ಪಕೋಡಿ, ದಿನಕರ ನಾಯಕ್ ನೇರಳಕಟ್ಟೆ, ವಾಸಪ್ಪ ಮಂಟಮೆ,ಲೋಕೇಶ್ ಪಳ್ಳತ್ತಿಲ ಮೊದಲಾದವರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ದೇವಾಲಯದ ಜೀರ್ಣೋದ್ಧಾರ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಹೆಚ್ಚಿನ ಮಂದಿ ದೇವಾಲಯದ ಕುರಿತು ಪ್ರಶ್ನಾ ಚಿಂತನೆ ನಡೆಸಬೇಕೆಂದು ಅನಿಸಿಕೆ ವ್ಯಕ್ತ ಪಡಿಸಿದರು. ಕಮಿಟಿ ರಚನೆ ಬಗ್ಗೆ ಮುಂದಿನ ಹಂತದಲ್ಲಿ ಸಮಾಲೋಚನೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಿರ್ಣಯಿಸಲಾಯಿತು. ಮುಂದಿನ ಸಮಾಲೋಚನಾ ಸಭೆಗೂ ಮೊದಲು ಊರಿನ ಪ್ರಮುಖರು ಸಭೆಯ ನಿರ್ಣಯದಂತೆ ದೇವಾಲಯಕ್ಕೆ ಸಂಬಂಧಿಸಿದ ನೂಜಿಬೈಲ್ ಮನೆಯ ಕೆಲವು ಪ್ರಮುಖರ ಭೇಟಿಗೆ ನಿರ್ಧಾರಿಸಲಾಯಿತು. ಜನಾಭಿಪ್ರಾಯ ಸಂಗ್ರಹಣಾ ಅಭಿಯಾನದ ಕೋರ್ ಕಮಿಟಿ ಯ ಪ್ರಮುಖರಾದ ಸದಾಶಿವ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.