ಕೋಡಿಂಬಾಡಿ ಗ್ರಾ.ಪಂ. ಕಛೇರಿಯಲ್ಲಿ ಗಣರಾಜ್ಯೋತ್ಸವ: ಸುದ್ದಿ ಜನಾಂದೋಲನಕ್ಕೆ ಬೆಂಬಲ

0

  • ಉತ್ತಮ ಸೇವೆಗೆ ಪುರಸ್ಕಾರ- ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಘೋಷಣೆ, ಪ್ರತಿಕೃತಿ ದಹನ
  • ಸುದ್ದಿ ಬಳಗದಿಂದ ಉತ್ತಮವಾದ ಕಾರ್ಯಕ್ರಮ: ರಾಮಚಂದ್ರ ಪೂಜಾರಿ
  • ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಪೂರ್ಣ ಬೆಂಬಲ: ಲಕ್ಷ್ಮಣ ಗೌಡ, ಉಷಾ

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರರವರು ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.


ಸುದ್ದಿ ಜನಾಂದೋಲನ ವೇದಿಕೆ ನೇತೃತ್ವದಲ್ಲಿ ದ.ಕ. ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಉತ್ತಮ ಸೇವೆಗೆ ಪುರಸ್ಕಾರ-ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಲಂಚ, ಭ್ರಷ್ಟಾಚಾರ ಮುಕ್ತ ನಮ್ಮ‌ ಊರು’ ಅಭಿಯಾನಕ್ಕೆ ಬೆಂಬಲ ಸೂಚಿಸಿ ಕಾರ್ಯಕ್ರಮದಲ್ಲಿ ಘೋಷಣೆ ಕೂಗಲಾಯಿತು. ಅಲ್ಲದೆ, ಲಂಚ, ಭ್ರಷ್ಟಾಚಾರದ ದಹನ‌ ಮಾಡಲಾಯಿತು. ಬಳಿಕ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ರಾಮಚಂದ್ರ ಪೂಜಾರಿಯವರು ಸುದ್ದಿ ಬಳಗ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಉತ್ತಮ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಓಟ್ ಮೂಲಕ ಆಯ್ಕೆ ಮಾಡಿ ಪ್ರೋತ್ಸಾಹಿಸಲಾಗಿತ್ತು.‌ ಇದೀಗ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಇಂತಹ ಹಲವು ಸಮಾಜಮುಖಿ ಕಾರ್ಯ ನಡೆಸುತ್ತಿರುವ ಸುದ್ದಿ ಬಳಗಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು. ತಾ.ಪಂ.ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಮತ್ತು ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯರವರು ಮಾತನಾಡಿ, ಸುದ್ದಿ ಬಳಗ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಪೂರ್ಣ ಬೆಂಬಲ ಇದೆ ಎಂದರು. ಗ್ರಾ.ಪಂ. ಕಾರ್ಯದರ್ಶಿ ರಮೇಶ್ ಕೆ, ಸದಸ್ಯರಾದ ವಿಶ್ವನಾಥ ಕೃಷ್ಣಗಿರಿ, ಮೋಹಿನಿ ಜನಾರ್ದನ ಗೌಡ ಕೋಡಿ, ಧರ್ಮಶ್ರೀ ಭಜನಾ ಮಂದಿರದ ಅಧ್ಯಕ್ಷ ಶೇಖರ ಪೂಜಾರಿ ಜೇಡರಪಾಲು ಮತ್ತಿತರರು ಭಾಗವಹಿಸಿದ್ದರು. ಗ್ರಾ.ಪಂ. ಸಿಬ್ಬಂದಿಗಳಾದ ಸುರೇಶ್ ನಾಯ್ಕ್ ಕಿನ್ನೆತಿಪಳಿಕೆ, ಸುರೇಶ ಕೆ., ಸುದ್ದಿ ಬಳಗದ ಮೋಹನ ಶೆಟ್ಟಿ ಉರುವಾಲು ಮತ್ತು ವಸಂತ ಸಾಮೆತ್ತಡ್ಕ ಸಹಕರಿಸಿದರು.

LEAVE A REPLY

Please enter your comment!
Please enter your name here