ಸಹಾಯಹಸ್ತ ಲೋಕಸೇವಾ ಟ್ರಸ್ಟ್‌ನಿಂದ ಸಹಾಯಧನದ ಚೆಕ್ ಹಸ್ತಾಂತರ, ಆಹಾರ ಸಾಮಾಗ್ರಿ ವಿತರಣೆ

0

ಪುತ್ತೂರು: ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್, ನೊಂದವರ ಬಾಳಿಗೆ ಆಸರೆ ಇದರ ವತಿಯಿಂದ ಜನವರಿ ತಿಂಗಳ ಸೇವಾ ಯೋಜನೆ ಕಾರ್ಯಕ್ರಮ ನಡೆಯಿತು.


ಉದ್ಯಮಿ ಸತೀಶ್ ಮಾತನಾಡಿ ಶುಭಹಾರೈಸಿದರು. ಟ್ರಸ್ಟ್‌ನ ಸಲಹೆಗಾರ ಉದಯ ಮಧೂರು ಮಾತನಾಡಿ ಟ್ರಸ್ಟ್ ಉತ್ತಮ ರೀತಿಯಲ್ಲಿ ಸೇವಾಯೋಜನೆ ನಡೆಸುತ್ತಿದೆ ಎಂದು ಹೇಳಿ ದಾನಿಗಳ ಸಹಕಾರ ಕೋರಿದರು. ಅಧ್ಯಕ್ಷ ಡಿ.ಎಸ್. ಉಪಸ್ಥಿತರಿದ್ದರು. ಕಾರ್ಯದರ್ಶಿ ಮನೋಹರ್ ಪಲಯಮಜಲು ಮಾತನಾಡಿ ಜನವರಿ ತಿಂಗಳಲ್ಲಿ ಟ್ರಸ್ಟಿನ ವತಿಯಿಂದ 1ಲಕ್ಷದ 16  ಸಾವಿರದ ಸೇವಾಯೋಜನೆ ನಡೆಸಲು ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. 7ಮಂದಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಹಸ್ತಾಂತರ ಹಾಗೂ ಆಯ್ದ ಫಲಾನುಭವಿಗಳಿಗೆ ಆಹಾರ ಸಾಮಾಗ್ರಿ ವಿತರಿಸಲಾಯಿತು. ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಸೇವಾಮಾಣಿಕ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here