ಪೋಳ್ಯದಲ್ಲಿ ಸ್ಕೂಟರ್, ಮಾರುತಿ ವ್ಯಾನ್ ಡಿಕ್ಕಿ – ಸವಾರನಿಗೆ ಗಾಯ

0

ಪುತ್ತೂರು: ಸ್ಕೂಟರ್ ಮತ್ತು ಮಾರುತಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪೋಳ್ಯದಲ್ಲಿ ನಡೆದಿದೆ.‌ ಅಪಘಾತದಿಂದಾಗಿ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ.


ಪುತ್ತೂರು ದ್ವಾರಕ ಕನ್‌ಸ್ಟ್ರಕ್ಷನ್‌ನ ಶರಣ್ ಎಂಬವರು ಸೈಟ್ ಇನ್‌ಸ್ಪೆಕ್ಷನ್ ಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಪೋಳ್ಯ ಸಮೀಪ ವಿರುದ್ಧ ದಿಕ್ಕಿನಿಂದ ಬಂದ ಮಾರುತಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ತೀವ್ರ ಗಾಯಗೊಂಡ ಶರಣ್ ಅವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಡಾ.ಭದ್ರಿನಾಥ್ ಮತ್ತು ಡಾ. ಗಣೇಶ್‌ ಮುದ್ರಾಜೆ ಅವರು ತನ್ನ ವಾಹನದಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here