ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಶಾಸಕ ಸಂಜೀವ ಮಠಂದೂರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಇಂದಿನ ಆಧುನಿಕ ಯುಗದಲ್ಲಿ ಡಿಜಿಟಲ್ ಸ್ಮಾರ್ಟ್ ಕ್ಲಾಸ್‌ಗಳು ಮಕ್ಕಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಿವೆ ಮತ್ತು ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರಿನ ಅಗತ್ಯ ಇದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್, ಉಪಾಧ್ಯಕ್ಷೆ ಸಪ್ನ ಜೀವನ್, ತಾ.ಪಂ. ಮಾಜಿ ಸದಸ್ಯ ಹರೀಶ್ ಬಿಜತ್ರೆ, ಕೋಡಿಂಬಾಡಿ ಕ್ಲಸ್ಟರ್ ಸಿ.ಆರ್.ಪಿ ಅಶ್ರಫ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮುನೀರ್, ಉಪಾಧ್ಯಕ್ಷ ಭರತ್ ಕುಮಾರ್, ಮುಖ್ಯಗುರು ಜೆಸಿಂತಾ ಆನ್ಸಿ ಮಿನೇಜಸ್, ಸಹಶಿಕ್ಷಕಿ ತಿಮ್ಮಕ್ಕ ಪಿ, ಅತಿಥಿ ಶಿಕ್ಷಕಿ ದಿವ್ಯಾ, ಗೌರವ ಶಿಕ್ಷಕಿ ರಕ್ಷಿತಾ ಕೇಶವ್, ಅಕ್ಷರ ದಾಸೋಹದ ಸಿಬ್ಬಂದಿಗಳಾದ ಚಂದ್ರಾವತಿ, ಹೇಮಲತಾ, ಎಸ್.ಡಿ.ಎಂ.ಸಿ ಸದಸ್ಯರಾದ ಸೀತಾ, ಮೀನಾಕ್ಷಿ, ಷರೀಫಾ, ಆಸ್ಮಾ, ತೇಜಾವತಿ, ರಹಿಮತ್, ಪೋಷಕರಾದ ರಮೇಶ್ ಶೆಟ್ಟಿಗಾರ್, ಸುಂದರಿ, ಮರಿಯಮ್ಮ, ಮಿಶ್ರಿಯಾ, ರಝೀಯಾ, ಅನಿತಾ ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.