‘ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ’ – ಎಬಿವಿಪಿ ಜಿಲ್ಲಾ ಸಮ್ಮೇಳನದಲ್ಲಿ ರವೀಂದ್ರ ಪಿ

0

ಪುತ್ತೂರು: ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ. ವಿದ್ಯಾರ್ಥಿಗಳು ರಾಷ್ಟ್ರದ ಬೆನ್ನೆಲುಬಿನಂತೆ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ ಅವರು ಹೇಳಿದರು.

ಪುತ್ತೂರು ಪುರಭವನದಲ್ಲಿ ಫೆ.2ರಂದು ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಇದರ ಜಿಲ್ಲಾ ಸಮ್ಮೇಳನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ನರೇಂದ್ರ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭೋಗ್, ಜಿಲ್ಲಾ ಸಹಪ್ರಮುಖರಾದ ಸುಬ್ರಮಣ್ಯ ಎಂ ಆರ್, ಪ್ರಾಂತ ಕರ್ನಾಟಕ ದಕ್ಷಿಣ ಕಾರ್ಯಸಮಿತಿ ಸದಸ್ಯ ಹಾಗೂ ಪುತ್ತೂರು ಜಿಲ್ಲಾ ಸಂಚಾಲಕರಾದ ಮಂಜುನಾಥ ಉಪಸ್ಥಿತರಿದ್ದರು. ವೈಷ್ಣವಿ ಪ್ರಾರ್ಥಿಸಿ, ಮಂಜುನಾಥ್ ಸ್ವಾಗತಿಸಿ, ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ: ಸಂಜೆ ನಡೆದ ಸಮಾರೋಪದಲ್ಲಿ ಹೈನುಗಾರಿಕೆ ಮತ್ತು ಕನ್‌ಸ್ಟ್ರಕ್ಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಯಗುರು ಆಚಾರ್ ಹಿಂದಾರು, ವಿದ್ಯಾರ್ಥಿ ಪರಿಷತ್‌ನ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯಿಲ, ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನಭೋಗ್, ಉಜಿರೆಯ ವಿದ್ಯಾರ್ಥಿನಿ ಪ್ರಮುಖ್ ಅಶ್ವಿನಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವೈಷ್ಣವಿ ಸ್ವಾಗತಿಸಿ, ವಂದಿಸಿ ನಿರೂಪಿಸಿದರು. ಧ್ವಜಾರೋಹಣದಿಂದ ಆರಂಭವಾದ ಸಮ್ಮೇಳನವು ಧ್ವಜ ಅವರೋಹಣದೊಂದಿಗೆ ಕೊನೆಗೊಂಡಿತು. ಬೆಳಿಗ್ಗೆ ಕೋರ್ಟ್ ಮಾರ್ಗವಾಗಿ ವಿದ್ಯಾರ್ಥಿಗಳ ಮೆರವಣಿಗೆಯು ಸಂಜೀವ ಶೆಟ್ಟಿ, ಶ್ರೀಧರ್ ಭಟ್ ರಸ್ತೆ ಮಾರ್ಗವಾಗಿ ಮರಳಿ ಪುರಭವನದಲ್ಲಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here