ಪುತ್ತೂರು: ಸಂಗೀತ ಕ್ಷೇತ್ರದಲ್ಲಿ ವಿಭಿನ್ನತೆಗೆ ಹೆಸರಾಗಿರುವ ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರ ಪುತ್ತೂರು ವತಿಯಿಂದ ರಾಜ್ಯ ಮಟ್ಟದ ಅದ್ದೂರಿ ಸುಗಮ ಸಂಗೀತೋತ್ಸವ ಫೆಬ್ರವರಿ 05 ರಂದು ಅಪರಾಹ್ನ 1.30 ರಿಂದ ರಾತ್ರಿ 8.30 ರವರೆಗೆ ಪುತ್ತೂರಿನ ಪುರಭವನದಲ್ಲಿ ನಡೆಯಲಿದೆ.
ಸುಗಮ ಸಂಗೀತೋತ್ಸವದ ಅಂಗವಾಗಿ ಅಪರಾಹ್ನ 1.30 ರಿಂದ 4.30 ರವರೆಗೆ ರಾಜ್ಯ ಮಟ್ಟದ “ಮಧುರ ಮಧುರವೀ ಕನ್ನಡ ಗಾನ” ಸುಗಮ ಸಂಗೀತ ರಿಯಾಲಿಟಿ ಶೋ ನ ಮೆಗಾ ಫೈನಲ್ ನಡೆಯಲಿದೆ.
ಬಳಿಕ 5.15 ರಿಂದ ನಾಡಿನಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ ಗಾನಸಿರಿ ಕಲಾ ಕೇಂದ್ರದ ಸುಪ್ರಸಿದ್ಧ ಗಾಯನ ತಂಡ ಪ್ರಸ್ತುತ ಪಡಿಸುವ ಗಾನಸಿರಿ ಸ್ವರ ಮಾಧುರ್ಯ ಕಾರ್ಯಕ್ರಮ ನಡೆಯಲಿದೆ.
ಡಾ. ಕಿರಣ್ ಕುಮಾರ್ ಗಾನಸಿರಿ, ಗಾನಸಿರಿಯ ಖ್ಯಾತ ಗಾಯಕಿ ಶ್ರೀಲಕ್ಷ್ಮಿ ಎಸ್ ಪುತ್ತೂರು ಮತ್ತು ಗಾನಸಿರಿಯ ಉದಯೋನ್ಮುಖ ಹಾಡುಗಾರರಾದ ದೀಪ್ತಿ ಪ್ರಭು , ಸೃಜನಾ ಪೂಜಾರಿ, ಪ್ರಸನ್ನ ಕುಮಾರ್ ಕಡಬ, ಯಶಸ್ ಬಿ ಜೆ ಹಾಗೂ ಮನಸ್ವಿ ಆರ್ ಶೆಟ್ಟಿ ವಿಟ್ಲ ಇವರು ಕಾರ್ಯಕ್ರಮ ನೀಡಲಿದ್ದಾರೆ.
ಧಾರ್ಮಿಕ ಮುಖಂಡ ಮುರಳೀ ಕೃಷ್ಣ ಹಸಂತಡ್ಕ , ಅರುಣ್ ಕುಮಾರ್ ಪುತ್ತಿಲ, ಉದ್ಯಮಿ ಗಳಾದ ಕರುಣಾಕರ ರೈ , ಜಯಂತ ನಡುಬೈಲ್ ಸಹಿತ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸಂಗೀತ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಗಾನಸಿರಿ ಪ್ರಕಟಣೆ ತಿಳಿಸಿದೆ.