ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಡಾ.ಗೀತಾಕುಮಾರಿ ಟಿ.ಆಯ್ಕೆ

0

ಪುತ್ತೂರು:ಫೆಬ್ರವರಿ 3 ರಿಂದ 5ರ ವರೆಗೆ ಉಜಿರೆಯಲ್ಲಿ ಹೇಮಾವತಿ ವೀರೇಂದ್ರ ಹೆಗಡೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ದ.ಕ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಗೆ ಡಾ.ಗೀತಾಕುಮಾರಿ ಟಿ.ಆಯ್ಕೆಯಾಗಿದ್ದಾರೆ.

ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಮೌನ ಮಾತು ಎನ್ನುವ ಚೊಚ್ಚಲ ಕವನಸಂಕಲನ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಆಕಾಶವಾಣಿ ಹಾಗೂ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಇವರ ಲೇಖನಗಳು, ವಿಮರ್ಶೆಗಳು ಹಾಗೂ ಲಲಿತ ಪ್ರಬಂಧಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.
ಇವರು ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನ್ ಭೋಗ ಇವರ ಪತ್ನಿ

LEAVE A REPLY

Please enter your comment!
Please enter your name here