ಪುತ್ತೂರು : ವಿಶೇಷ ಚೇತನ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿಕ್ರಮ್ ಬಿ. 17ರ ಬಾಲಕರ ವಿಭಾಗದಲ್ಲಿ ಈಟಿ ಎಸೆತ ಮತ್ತು ಗುಂಡೆಸೆತದಲ್ಲಿ ಪ್ರಥಮ ಸ್ಥಾನ ಪಡೆದು ಫೆ.11, 12ರಂದು ಮಧುಗಿರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆ ಪಡೆದಿದ್ದಾರೆ.